ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ, 20–1–1970

​ಪ್ರಜಾವಾಣಿ ವಾರ್ತೆ
Published 19 ಜನವರಿ 2020, 19:45 IST
Last Updated 19 ಜನವರಿ 2020, 19:45 IST

ಪ್ರಧಾನಿ ಕಾಂಗ್ರೆಸ್:ವಿಧಾನಸಭಾ ಪಕ್ಷಕ್ಕೆ ಸಿದ್ಧವೀರಪ್ಪ, ಮೇಲ್ಮನೆಗೆ ಬಂದೀಗೌಡ ನಾಯಕರು
ಬೆಂಗಳೂರು, ಜ. 19–
ಇಂದು ಅಸ್ತಿತ್ವಕ್ಕೆ ಬಂದ ವಿಧಾನಸಭೆಯ ಪ‍್ರಧಾನಿ ಕಾಂಗ್ರೆಸ್ ಪಕ್ಷವು 62 ವರ್ಷ ವಯಸ್ಸಿನ ಮಾಜಿ ಸಚಿವ ಶ್ರೀ ಎಚ್. ಸಿದ್ಧವೀರಪ್ಪ ಅವರನ್ನು ತನ್ನ ನಾಯಕನನ್ನಾಗಿ ಸರ್ವಾನುಮತದಿಂದ ಚುನಾಯಿಸಿತು.

ವಿಧಾನ ಪರಿಷತ್ತಿನ ಪ್ರಧಾನಿ ಕಾಂಗ್ರೆಸ್ ಪಕ್ಷದ ನಾಯಕರಾಗಿ ಡಾ. ಸಿ. ಬಂದೀಗೌಡ ಅವರು ಒಮ್ಮತದಿಂದ ಆಯ್ಕೆಯಾದರು.

ಬಜೆಟ್ ಅಧಿವೇಶನ ಮುಗಿವವರೆಗೆ ರಾಂ ರಾಜೀನಾಮೆ ಇಲ್ಲ
ನವದೆಹಲಿ, ಜ. 19–
ಕೇಂದ್ರ ಸಚಿವರಾಗಿ ಮುಂದುವರಿಯುವುದರ ಜೊತೆಗೆ ಕಾಂಗ್ರೆಸ್ ಸಂಸ್ಥೆಯ ಅಧ್ಯಕ್ಷರ ಕಾರ್ಯವನ್ನು ನಿರ್ವಹಿಸಲು ಜಗಜೀವನರಾಂ ನಿರ್ಧರಿಸಿದ್ದಾರೆ. ಸಂಸತ್ತಿನ ಬಜೆಟ್ ಅಧಿವೇಶನ ಮುಗಿಯುವವರೆಗೆ ತಾವು ಸಂಪುಟಕ್ಕೆ ರಾಜೀನಾಮೆ ನೀಡುವ ಅಗತ್ಯವಿಲ್ಲವೆಂಬ ರಾಂ ಅವರ ವಾದವನ್ನು ಪ್ರಧಾನಿ ಇಂದಿರಾ ಗಾಂಧಿ ಒಪ್ಪಿಕೊಂಡಿದ್ದಾರೆ.

ADVERTISEMENT

ರಾಜ್ಯದ ಆರ್ಥಿಕ ಸಮಸ್ಯೆ: ಕೇಂದ್ರದ ನಿಲುವು ‘ಸಹಾಯಕ’
ಬೆಂಗಳೂರು, ಜ. 19–
ಆರ್ಥಿಕ ವಿಷಯಗಳಲ್ಲಿ ಮೈಸೂರು ರಾಜ್ಯ ಎದುರಿಸುತ್ತಿರುವ ಸಂಕಟಕರ ಸಮಸ್ಯೆಗಳ ಬಗೆಗೆ ಕೇಂದ್ರ ಸರ್ಕಾರ ಹಾಗೂ ಯೋಜನೆ ಆಯೋಗ ‘ಅತ್ಯಂತ ಸಹಾಯಕ ಮತ್ತು ರಚನಾತ್ಮಕ ನಿಲುವನ್ನು ತಳೆದಿವೆ’ ಎಂದು ರಾಜ್ಯಪಾಲ ಶ್ರೀ ಧರ್ಮವೀರರವರು ಇಂದು ರಾಜ್ಯದ ಶಾಸಕರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.