ADVERTISEMENT

50 ವರ್ಷಗಳ ಹಿಂದೆ | ಭಾನುವಾರ 8–3–1970

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 20:05 IST
Last Updated 7 ಮಾರ್ಚ್ 2020, 20:05 IST

ಗಡಿ ಪ್ರಶ್ನೆ: ಇಂದಿರಾ–ನಾಯಕ್ ಚರ್ಚೆ‌ ಬಜೆಟ್ ಅಧಿವೇಶನ ಮುಗಿಯುವುದರೊಳಗೆ ಹೊಸ ಸೂತ್ರದ ರಚನೆ
ನವದೆಹಲಿ, ಮಾ. 7– ಮೇ ತಿಂಗಳಿನಲ್ಲಿ ಸಂಸತ್ ಬಜೆಟ್‌ ಅಧಿವೇಶನ ಅಂತ್ಯಗೊಳ್ಳುವುದರೊಳಗೆ ಮೈಸೂರು–ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥಕ್ಕೆ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರು ಅಖೈರು ಸೂತ್ರವೊಂದನ್ನು ರೂಪಿಸುವ ಸಂಭವವಿದೆ.

ಗಡಿ ವಿವಾದ ಕುರಿತು ಶ್ರೀಮತಿ ಇಂದಿರಾಗಾಂಧಿಯವರೊಡನೆ ಇಂದು ಸುಮಾರು ಅರ್ಧಗಂಟೆ ಕಾಲ ಮಾತುಕತೆ ನಡೆಸಿದ ಮಹಾರಾಷ್ಟ್ರ ಮುಖ್ಯಮಂತ್ರಿಯವರು ನಂತರ ಸುದ್ದಿಗಾರರೊಡನೆ ಮಾತನಾಡುತ್ತ ಈ ವಿಷಯ ತಿಳಿಸಿದರು.

ರಾಷ್ಟ್ರಪತಿಗೆ ಎಂ. ಇ. ಎಸ್ ಮನವಿ ಪತ್ರ
ನವದೆಹಲಿ: ಮಾ.7 – ಅನೇಕ ದಿನಗಳಿಂದಲೂ ನೆನೆಗುದಿಗೆ ಬಿದ್ದಿರುವ ಮೈಸೂರು ಮಹಾರಾಷ್ಟ್ರ ಗಡಿ ವಿವಾದವನ್ನು ಪಾರ್ಲಿಮೆಂಟ್ ಬಜೆಟ್ ಅಧಿವೇಶನಕ್ಕೂ ಮುಂಚೆ ಇತ್ಯರ್ಥ ಪಡಿಸಬೇಕೆಂದು ಒತ್ತಾಯಪಡಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ ನಿಯೋಗವು ಇಂದು ರಾಷ್ಟ್ರಪತಿ ವಿ. ವಿ. ಗಿರಿ ಅವರಿಗೆ ಮನವಿ ಪತ್ರ ಸಲ್ಲಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.