ADVERTISEMENT

ಶನಿವಾರ, 3–1–1970

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 22:20 IST
Last Updated 2 ಜನವರಿ 2020, 22:20 IST

ಸಂಸತ್, ಅಸೆಂಬ್ಲಿ ಚುನಾವಣೆ ವೆಚ್ಚದ ಪರಿಮಿತಿ ಏರಿಕೆ
ಮುಂಬಯಿ, ಜ. 2– ಸಂಸತ್ ಮತ್ತು ವಿಧಾನಸಭಾ ಕ್ಷೇತ್ರಗಳ ಉಮೇದುವಾರರು ಚುನಾವಣೆಗಳಲ್ಲಿ ಮಾಡಬಹುದಾದ ಖರ್ಚಿನ ಮೇಲಿದ್ದ ಪರಿಮಿತಿಯನ್ನು ಹೆಚ್ಚಿಸಲು ಮುಖ್ಯ ಚುನಾವಣಾಧಿಕಾರಿಗಳ ಸಮ್ಮೇಳನ ಇಂದು ನಿರ್ಧರಿಸಿತು.

ಜೀವನ ವೆಚ್ಚ ಮತ್ತು ಮತದಾರರ ಸಂಖ್ಯೆ ಹೆಚ್ಚಿರುವುದರಿಂದ 15 ವರ್ಷಗಳ ಹಿಂದೆ ಗೊತ್ತುಮಾಡಿದ್ದ ಈ ಪರಿ
ಮಿತಿಯನ್ನು ಹೆಚ್ಚಿಸಲು ತೀರ್ಮಾನಿಸಿತು.

ಸಂಸತ್ ಕ್ಷೇತ್ರದಲ್ಲಿ ಈ ವೆಚ್ಚದ ಮಟ್ಟ ಈಗಿನ 25 ಸಾವಿರ ರೂ.ಗಳಿಂದ 35 ಸಾವಿರ ರೂ.ಗಳಿಗೆ ಹೆಚ್ಚುತ್ತದೆ. ವಿಧಾನಸಭಾ ಕ್ಷೇತ್ರಗಳಲ್ಲಿನ ಗರಿಷ್ಠ ವೆಚ್ಚ ರಾಜ್ಯ ರಾಜ್ಯಕ್ಕೆ ವ್ಯತ್ಯಾಸವಾಗುತ್ತದೆ. ಇದರ ಪ್ರಕಾರ ಮೈಸೂರಿನಲ್ಲಿ 10 ಸಾವಿರ ರೂ.ಗಳನ್ನು ವೆಚ್ಚ ಮಾಡಬಹುದು.

ADVERTISEMENT

ತಾಂತ್ರಿಕ ಶಿಕ್ಷಣದಲ್ಲಿ ಬದಲಾವಣೆ
ಮದ್ರಾಸ್, ಜ. 2– ಮುಂದಿನ ಶಾಲಾ ವರ್ಷಕ್ಕೂ ಮುಂಚೆಯೇ ರಾಷ್ಟ್ರದಾದ್ಯಂತ ತಾಂತ್ರಿಕ ಶಿಕ್ಷಣವನ್ನು ಪೂರ್ಣವಾಗಿ ಪುನರ್ವಿಮರ್ಶಿಸುವುದಷ್ಟೇ ಅಲ್ಲದೆ ಸಮಗ್ರ ಬದಲಾವಣೆಗಳಿಂದ ಸುವ್ಯವಸ್ಥೆಗೊಳಿಸುವುದಾಗಿ ಕೇಂದ್ರ ಶಿಕ್ಷಣ ಸಚಿವ ಡಾ. ವಿ.ಕೆ.ಆರ್.ವಿ. ರಾವ್ ಇಂದು ತಿಳಿಸಿದರು.

ಈ ಬಗ್ಗೆ ಸುಮಾರು ಎರಡು ವಾರಗಳಲ್ಲೇ ನೇಮಿಸುವ ವಿದೇಶಿ ತಜ್ಞರ ಸಮಿತಿಯು ಐದು ತಿಂಗಳಲ್ಲಿ ವರದಿ
ಸಿದ್ಧಪಡಿಸುವುದೆಂದು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.