ADVERTISEMENT

50 ವರ್ಷಗಳ ಹಿಂದೆ: ಭಾನುವಾರ 17–10–1971

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 19:31 IST
Last Updated 16 ಅಕ್ಟೋಬರ್ 2021, 19:31 IST
   

ಸ್ವದೇಶಕ್ಕೆ ಯಹ್ಯಾರ ಹಠಾತ್ ವಾಪಸು: ದೆಹಲಿಯ ಕಳವಳ

ನವದೆಹಲಿ, ಅ. 16– ಭಾರತದ ಗಡಿಗಳಲ್ಲಿ ಪಾಕಿಸ್ತಾನಿ ಸೈನ್ಯದ ಭಾರಿ ಜಮಾವಣೆ ಜೊತೆಗೆ ಯಹ್ಯಾಖಾನರು ತಮ್ಮ ಟೆಹರಾನ್‌ ಭೇಟಿಯನ್ನು ಒಂದು ದಿನ ಮೊಟಕುಗೊಳಿಸಿ ಇಸ್ಲಾಮಾಬಾದಿಗೆ ಹಿಂದಿರುಗಿರುವುದು ಪಾಕಿಸ್ತಾನಿ ಉದ್ದೇಶಗಳ ಬಗೆಗೆ ಇಲ್ಲಿ ತೀವ್ರ ಕಳವಳಕ್ಕೆ ಎಡೆಕೊಟ್ಟಿದೆ.

ಕಳೆದ ಕೆಲವು ವಾರಗಳಿಂದ ಪಾಕಿಸ್ತಾನದ ಸೈನ್ಯ ಜಮಾಯಿಸುತ್ತಿದೆ. ಯಹ್ಯಾ ಖಾನರೇ ಯುದ್ಧೋನ್ಮಾದ ಪ್ರಚೋದಿಸುತ್ತಿದ್ದಾರೆ ಗಡಿ ಗ್ರಾಮಗಳಲ್ಲಿ ನಾಗರಿಕರನ್ನು ಸ್ಥಳಾಂತರಿಸಿ ಕಾಶ್ಮೀರದಿಂದ ರಾಜಸ್ಥಾನದವರೆಗೆ ಕಂದಕಗಳನ್ನು ತೋಡಲಾಗಿದೆ.

ADVERTISEMENT

ಭಾರತದ ಕಡೆಯ ಗಡಿಯಲ್ಲಿ ಮಾತ್ರ ಹೆದರಿಗೆ ಹುಟ್ಟಿಲ್ಲ. ಗ್ರಾಮಗಳಲ್ಲಿ ಜನಜೀವನ ಎಂದಿನಂತಿದೆ. ಆದರೆ ಪಾಕಿಸ್ತಾನದ ಬೆದರಿಕೆ ಎದುರಿಸಲು ಭಾರತವೂ ಪರಿಣಾಮಕಾರಕವಾಗಿ ಸಿದ್ಧತೆ ಮಾಡಿಕೊಂಡಿದೆ. ಗಡಿ ಪ್ರದೇಶಗಳಲ್ಲಿ ಭಾರಿ ಬಿಕ್ಕಟ್ಟಿದೆ. ಇಂದು ಪಶ್ಚಿಮ ವಲಯದಲ್ಲಿ ಘರ್ಷಣೆಗಳೇನೂ ಸಂಭವಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.