ADVERTISEMENT

50 ವರ್ಷಗಳ ಹಿಂದೆ: ಸೋಮವಾರ, ಅಕ್ಟೋಬರ್ 25, 1971

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 19:36 IST
Last Updated 24 ಅಕ್ಟೋಬರ್ 2021, 19:36 IST
   

ಹೊಸ ಶ್ರೀಮಂತ ರೈತರ ಮೇಲಿನ ತೆರಿಗೆ ಏರಿಕೆ ಆಲೋಚನೆ ನ್ಯಾಯಬದ್ಧ
ನವದೆಹಲಿ, ಅ. 24– ಗ್ರಾಮಾಂತರದ ಹೊಸ ಶ್ರೀಮಂತ ರೈತರ ಮೇಲೆ ತೆರಿಗೆ ಹೆಚ್ಚಿಸುವುದಕ್ಕೆ ಸಕಾರಣಗಳಿವೆಯೆಂಬುದು ಯೋಜನಾ ಆಯೋಗದ ಅಭಿಪ್ರಾಯ.

‘ವ್ಯವಸಾಯ ರಂಗದ ಮೇಲೆ ಇರುವ ನೇರ ತೆರಿಗೆ ಎಂದರೆ ಕಂದಾಯ. ಅದನ್ನು ಎಕರೆ ಭೂಮಿಗೆ ಏಕರೀತಿಯ ದರದಲ್ಲಿವಿಧಿಸಲಾಗುತ್ತಿದೆ. ಆದರೆ ಕಂದಾಯದ ದರಕ್ಕೂ ವರಮಾನ ಮತ್ತು ಬೆಲೆಗಳ ಬದಲಾ ವಣೆಗೂ ಯಾವ ಬಗೆಯ ಸಂಬಂಧವಿಲ್ಲದಂತಾಗಿದೆ’ ಎಂದು ಆಯೋಗವು ಯೋಜನಾ ಸಚಿವ ಶಾಖೆಯ ಸಲಹಾ ಸಮಿತಿಯ ಸದಸ್ಯರಿಗೆ ಹಂಚಿರುವ ಟಿಪ್ಪಣಿಯೊಂದರಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT