ADVERTISEMENT

50 ವರ್ಷಗಳ ಹಿಂದೆ | ಶುಕ್ರವಾರ, 3–4–1970

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 19:45 IST
Last Updated 2 ಏಪ್ರಿಲ್ 2020, 19:45 IST

ಮುಖ್ಯಮಂತ್ರಿಗಳು ಒಪ್ಪದೆ ಪಾಟಸ್ಕರ್‌ ಸೂತ್ರದ ಅನ್ವಯವಿಲ್ಲ
ನವದೆಹಲಿ, ಏ. 2–
ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಒಪ್ಪದ ಹೊರತು, ಮೈಸೂರು– ಮಹಾರಾಷ್ಟ್ರ ರಾಜ್ಯಗಳ ನಡುವಣ ಗಡಿ ವಿವಾದದ ಇತ್ಯರ್ಥಕ್ಕೆ ಪಾಟಸ್ಕರ್‌ ಸೂತ್ರವನ್ನು ಅನ್ವಯ ಮಾಡುವುದಕ್ಕೆ ಆಗುವುದಿಲ್ಲವೆಂದು ಕೇಂದ್ರ ಗೃಹ ಖಾತೆ ಸ್ಟೇಟ್‌ ಸಚಿವ
ಶ್ರೀ ವಿದ್ಯಾಚರಣ್‌ ಶುಕ್ಲಾ ಅವರು ಇಂದು ಲೋಕಸಭೆಯಲ್ಲಿ ಹೇಳಿದರು.

ಕೋಲಾರ ಜಿಲ್ಲೆಯಲ್ಲಿ 3 ವರ್ಷ ಕಂದಾಯ ಮಾಫಿ: ಶೀಘ್ರವೇ ಆಜ್ಞೆ
ಬೆಂಗಳೂರು, ಏ. 2–
ಕೋಲಾರ ಜಿಲ್ಲೆಯಲ್ಲಿ 1965ರಿಂದ 3 ವರ್ಷಗಳ ಕಾಲ ಕಂದಾಯವನ್ನು ಮಾಫಿ ಮಾಡಬೇಕೆಂದು ಜಿಲ್ಲಾಧಿಕಾರಿ ಶಿಫಾರಸು ಮಾಡಿರುವ ಪತ್ರ ಸರ್ಕಾರಕ್ಕೆ ತಲುಪಿದೆಯೆಂದು, ಇದನ್ನು ಸರ್ಕಾರ ಒಪ್ಪಿದ್ದು ಇಷ್ಟರಲ್ಲೇ ಸರ್ಕಾರಿ ಆಜ್ಞೆ ಹೊರಡಿಸಲಾಗುವುದೆಂದು ರೆವಿನ್ಯೂ ಸಚಿವ ಶ್ರೀ ಎಚ್‌.ವಿ.ಕೌಜಲಗಿ ಅವರು ಇಂದು ವಿಧಾನಪರಿಷತ್ತಿನಲ್ಲಿ ತಿಳಿಸಿದರು.

ಕಳೆದ 3 ವರ್ಷಗಳಿಂದಲೂ ಕೋಲಾರ ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾಗದೆ ಬೆಳೆ ಹಾಳಾಗಿರುವುದರಿಂದ ರೈತರು ಯಾವ ವಿಧವಾದ ತೆರಿಗೆಯನ್ನೂ ಕೊಡುವ ಪರಿಸ್ಥಿತಿಯಲ್ಲಿ ಇಲ್ಲವೆಂಬ ಕಾರಣದಿಂದ ಕಂದಾಯವನ್ನು ಮಾಫಿ ಮಾಡಬೇಕೆಂದು ಜಿಲ್ಲಾಧಿಕಾರಿ ಶಿಫಾರಸು ಮಾಡಿದ್ದಾರೆಂದು ಸಚಿವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.