ADVERTISEMENT

50 ವರ್ಷಗಳ ಹಿಂದೆ | ಸೋಮವಾರ, 4 ಮೇ 1970

​ಪ್ರಜಾವಾಣಿ ವಾರ್ತೆ
Published 3 ಮೇ 2020, 19:30 IST
Last Updated 3 ಮೇ 2020, 19:30 IST

ಮೊದಲ ಸಿಂಗಲ್ಸ್‌ನಲ್ಲಿ ಭಾರತಕ್ಕೆ ಜಯ

ಬೆಂಗಳೂರು, ಮೇ 3– ಭಾರತದ ಅಗ್ರಮಾನ್ಯ ಆಟಗಾರ ಪ್ರೇಮಜಿತ್‌ಲಾಲ್‌ ಅವರು ಐದು ಸೆಟ್‌ಗಳೂ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಎಡಗೈ ಆಟಗಾರ ರೇ ರಫಲ್ಸ್‌ ಅವರ ಮೇಲೆ ಗೆದ್ದು ಡೇವಿಸ್‌ ಕಪ್‌ ಅಂತರರಾಷ್ಟ್ರೀಯ ಟೆನಿಸ್‌ ಚಾಂಪಿಯನ್‌ಷಿಪ್‌ ಪೂರ್ವ ವಲಯ ಫೈನಲ್‌ನಲ್ಲಿ ಭಾರತಕ್ಕೆ 1–0 ಪಂದ್ಯ ಲೀಡ್‌ ತಂದುಕೊಟ್ಟರು.

ಆಸ್ಟ್ರೇಲಿಯಾದ ಡಿಕ್‌ ಕ್ರೀಲಿ ಹಾಗೂ ಭಾರತದ ಜಯದೀಪ್‌ ಮುಖರ್ಜಿ ನಡುವಣ ದ್ವಿತೀಯ ಸಿಂಗಲ್ಸ್‌ ಪಂದ್ಯ ಅಪೂರ್ಣವಾಗಿ ಕೊನೆಗೊಂಡಿತು. ಮೊದಲ ಎರಡು ಸೆಟ್‌ಗಳನ್ನು ಕ್ರೀಲಿ ಅವರೂ ನಂತರದ ಎರಡು ಸೆಟ್‌ಗಳನ್ನು ಮುಖರ್ಜಿ ಅವರೂ ತೆಗೆದುಕೊಂಡರು. ಸೋಮವಾರ ಬೆಳಿಗ್ಗೆ 10.30ರಿಂದ ಈ ಪಂದ್ಯದ ಅಂತಿಮ ಸೆಟ್‌ ನಡೆಯಲಿದೆ.

ADVERTISEMENT

ನಾಲ್ಕು ರಾಜ್ಯಗಳಲ್ಲಿ ಮಾತ್ರ ಮೇಲ್ಮನೆ ಮುಂದುವರಿಕೆ

ನವದೆಹಲಿ, ಮೇ 3– ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಮೇಲ್ಮನೆಗಳನ್ನು ರದ್ದು ಮಾಡುವ ಕೇಂದ್ರ ಶಾಸನ ಜಾರಿಗೆ ಬಂದಾಗ 17 ರಾಜ್ಯಗಳಲ್ಲಿ ನಾಲ್ಕರಲ್ಲಿ ಮಾತ್ರ ದ್ವಿಸದನ ವಿಧಾನ ಮಂಡಲಗಳಿರುತ್ತವೆ.

ಮೈಸೂರು, ಮಹಾರಾಷ್ಟ್ರ, ತಮಿಳುನಾಡು ಹಾಗೂ ಜಮ್ಮು ಮತ್ತು ಕಾಶ್ಮೀರ ಈ ನಾಲ್ಕು ರಾಜ್ಯಗಳು.

ಮೇಲ್ಮನೆ ರದ್ದು ಮಾಡಲು ರಾಜ್ಯ ಸರ್ಕಾರ ಆಲೋಚಿಸುತ್ತಿದೆಯೆಂದು ತಮಿಳುನಾಡು ಮುಖ್ಯಮಂತ್ರಿ ಶ್ರೀ ಕರುಣಾನಿಧಿ ಅವರು ಈಚೆಗೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.