ADVERTISEMENT

50 ವರ್ಷಗಳ ಹಿಂದೆ | ಮಂಗಳವಾರ, 30–6–1970

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 19:30 IST
Last Updated 29 ಜೂನ್ 2020, 19:30 IST

ರಾಜ್ಯದಲ್ಲಿ ಪ್ರಥಮ ಬಾರಿಗೆ ವಜ್ರದ ಹರಾಜ್‌
ಬೆಂಗಳೂರು, ಜೂನ್‌ 29–
ಅರ್ಥಸಚಿವ ಶ್ರೀ ರಾಮಕೃಷ್ಣ ಹೆಗಡೆ ಅವರು ಮೂರು ಬಾರಿ ಬೆಳ್ಳಿ ಸುತ್ತಿಗೆಯಿಂದ ಕುಟ್ಟಿದರು.

ರಾಷ್ಟ್ರೀಯ ಖನಿಜಾಭಿವೃದ್ಧಿ ಕಾರ್ಪೊರೇಷನ್ನಿನ ಆಶ್ರಯದಲ್ಲಿ ನಗರದಲ್ಲಿ ವಜ್ರಗಳ ಹರಾಜನ್ನು ಉದ್ಘಾಟಿಸಿದರು. 233 ಕ್ಯಾರೆಟ್‌ ತೂಕದ ವಜ್ರಕ್ಯಾರೆಟ್‌ ಒಂದಕ್ಕೆ 2,400 ರೂಪಾಯಿಗೆ ಕೂಗಿದ ಶ್ರೀ ಕೆ.ಪಿ.ಪೋದ್ದಾರ್‌ ಅವರಿಗೆ ಹೋಯಿತು.

ರಾಷ್ಟ್ರೀಯ ಖನಿಜಾಭಿವೃದ್ಧಿ ಕಾರ್ಪೊರೇಷನ್‌, ಮಧ್ಯಪ್ರದೇಶದ ಮಾಗ್‌ವಾನ್‌ ಹಾಗೂ ರಾಂಖೇರಿಯಾ ಗಣಿಗಳಲ್ಲಿ ವಜ್ರಗಳನ್ನು ತೆಗೆಯುತ್ತಿದೆ. ಹಾಗೆ ತೆಗೆದು ರೂಪು ಕೊಡುವ ವಜ್ರಗಳನ್ನು ಸಾರ್ವಜನಿಕ ಹರಾಜುಗಳ ಮೂಲಕ ಮಾರಾಟ ಮಾಡುತ್ತದೆ. ಇಂದು ಹೋಟೆಲ್‌ ಇಂಟರ್‌ನ್ಯಾಷನಲ್‌ನಲ್ಲಿ ನಡೆದ ಹರಾಜು ರಾಜ್ಯದಲ್ಲಿ ಪ್ರಪ್ರಥಮ. ಆದರೆ ಕಾರ್ಪೊರೇಷನ್‌ ನಡೆಸುತ್ತಿರುವ 28ನೇ ಹರಾಜು.

ADVERTISEMENT

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಪಕ್ಷಗಳ ಕೂಟದ ರಚನೆಗೆ ಮಸಾನಿ ಅವರ ಬೆಂಬಲ
ನವದೆಹಲಿ, ಜೂನ್‌ 29–
ಸಂಸ್ಥಾ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯು ನಿನ್ನೆ ಅಂಗೀಕರಿಸಿದ ರಾಜಕೀಯ ನಿರ್ಣಯದ ಆಧಾರದ ಮೇಲೆ ಸಂಸತ್ತಿನಲ್ಲಿ ರಾಷ್ಟ್ರೀಯವಾದಿ, ಪ್ರಜಾಪ್ರಭುತ್ವವಾದಿ ಮತ್ತು ಸಮಾಜವಾದಿ ಪಕ್ಷಗಳನ್ನೊಳಗೊಂಡ ‘ರಾಷ್ಟ್ರೀಯ ಪ್ರಜಾಪ್ರಭುತ್ವವಾದಿ ಪಕ್ಷಗಳ ಕೂಟ’ದ ರಚನೆಯನ್ನು ಸ್ವತಂತ್ರ ಪಕ್ಷದ ಅಧ್ಯಕ್ಷ ಎಂ.ಆರ್‌.ಮಸಾನಿ ಅವರು ಇಂದು ಬೆಂಬಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.