ADVERTISEMENT

50 ವರ್ಷಗಳ ಹಿಂದೆ | ಶುಕ್ರವಾರ, 3–7–1970

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 19:30 IST
Last Updated 2 ಜುಲೈ 2020, 19:30 IST

ರಾಜ್ಯದಲ್ಲಿ ಹೊಸ ಕೈಗಾರಿಕೆಗಳ ವಿಸ್ತರಣೆ ಸಾಧ್ಯತೆ
ಬೆಂಗಳೂರು, ಜುಲೈ 2–
ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್‌ ಅವರ ಮೂರು ವಾರಗಳ ಕಾಲದ ಜಪಾನ್‌ ಪ್ರವಾಸದ ಫಲವಾಗಿ ರಾಜ್ಯದಲ್ಲಿ ಮೂರು ದೊಡ್ಡ ಪ್ರಮಾಣದ ಹಾಗೂ ಮೂರು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ನಾನಾ ರೀತಿಯ ವಿದೇಶಿ ನೆರವು ದೊರೆತು ಅಸ್ತಿತ್ವಕ್ಕೆ ಬರುವ ಸಾಧ್ಯತೆ ಹೆಚ್ಚಿದೆ.

ಜಪಾನಿಗೆ ಬೀಡು ಕಬ್ಬಿಣದ ರಫ್ತಿನ ಬಗ್ಗೆ ತಾವು ನಡೆಸಿದ ಮಾತುಕತೆಗಳ ವಿವರಗಳನ್ನು ಮುಖ್ಯಮಂತ್ರಿ ‘ಮುಂದಿನ ಕ್ರಮ’ಕ್ಕಾಗಿ ಪ‍್ರಧಾನಿ ಹಾಗೂ ಸಂಬಂಧಪಟ್ಟ ಕೇಂದ್ರ ಸಚಿವರಿಗೆ ಇನ್ನೊಂದು ವಾರದಲ್ಲಿ ಕಳುಹಿಸಿ ಕೊಡಲಿದ್ದಾರೆ.

ಜಪಾನಿನ ಕೈಗಾರಿಕೆ ಸಂಸ್ಥೆಗಳೊಡನೆ ಈಗಿರುವ ಸಹಾಯ ಒಪ್ಪಂದಗಳನ್ನು ಭದ್ರಪಡಿಸುವುದು, ಈಗಿರುವ ಒಪ್ಪಂದಗಳ ವಿಸ್ತರಣೆ ಸಾಧ್ಯತೆಯ ಪರಿಶೀಲನೆ, ರಾಜ್ಯದ ಅಗತ್ಯಗಳಿಗೆ ಅನುಗುಣವಾದ ಹೊಸ ವ್ಯವಸ್ಥೆ ಬಗ್ಗೆ ಮಾತುಕತೆ ನಡೆಸುವುದು ಮುಖ್ಯಮಂತ್ರಿ ಅವರ ಜಪಾನ್‌ ಭೇಟಿಯ ಉದ್ದೇಶವಾಗಿತ್ತು.

ADVERTISEMENT

ಕೆಂಗಲ್‌ರಿಗೆ ಮುಖ್ಯಮಂತ್ರಿ ಅಭಿನಂದನೆ
ಬೆಂಗಳೂರು, ಜುಲೈ 2–
ಇಂದು ಜಪಾನ್‌ ಪ್ರವಾಸದಿಂದ ಹಿಂದಿರುಗಿದ ಕೂಡಲೇ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು, ಕೇಂದ್ರದ ಸಚಿವರಾಗಿ ನೇಮಕವಾಗಿರುವ ಶ್ರೀ ಹನುಮಂತಯ್ಯ ಅವರಿಗೆ ಅಭಿನಂದನೆಗಳನ್ನು ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.