ADVERTISEMENT

50 ವರ್ಷಗಳ ಹಿಂದೆ: ಶನಿವಾರ, 31–10–1970

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 19:31 IST
Last Updated 30 ಅಕ್ಟೋಬರ್ 2020, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಅಕ್ಸಾಯ್‌ಚಿನ್, ನೀಫಾದ ಕೆಲಭಾಗ ಇನ್ನೂ ಚೀನಾದ ಪ್ರದೇಶವೆಂದು ಉಲ್ಲೇಖ

ನವದೆಹಲಿ, ಅ. 30– ಈ ವಾರ ಮಾಸ್ಕೊಗೆ ಭೇಟಿ ಕೊಟ್ಟಿದ್ದ ಅವಧಿಯಲ್ಲಿ ಭಾರತದ ವಿದೇಶಾಂಗ ಖಾತೆ ಕಾರ್ಯದರ್ಶಿ ಶ್ರೀ ಟಿ.ಎನ್. ಕೌಲ್ ಅವರಿಗೆ ತೋರಿಸಿದ ಇತ್ತೀಚಿನ ರಷ್ಯಾ ಭೂಪಟಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಭಾಗವನ್ನು ಭಾರತದ ಪ್ರದೇಶವಾಗಿ ತೋರಿಸಲಾಗಿದೆ. ಆದರೆ, ಲಡಾಖ್‌ನಲ್ಲಿನ ಅಕ್ಸಾಯ್‌ಚಿನ್ ಹಾಗೂ ನೀಫಾದ ಕೆಲವು ಭಾಗಗಳನ್ನು ಚೀನಾ ಪ್ರದೇಶವೆಂದೂ ತೋರಿಸಲಾಗಿದೆ.

ರಷ್ಯಾದ ವಿಶ್ವಕೋಶದ ಕಳೆದ ವರ್ಷದ ಪ್ರತಿಯಲ್ಲಿನ ವಿವಾದಾಸ್ಪದ ಭೂಪಟಗಳ ಬಗ್ಗೆ ಶ್ರೀ ಕೌಲ್ ಅವರು ಮಾತುಕತೆ ನಡೆಸಿದ್ದರೆಂದೂ ಇತ್ತೀಚಿನ ಭೂಪಟಗಳನ್ನು ರಷ್ಯಾ ಅಧಿಕಾರಿಗಳು ಅವರಿಗೆ ತೋರಿಸಿದರೆಂದೂ ವಿದೇಶಾಂಗ ಖಾತೆ ವಕ್ತಾರರೊಬ್ಬರು ಇಂದು ತಿಳಿಸಿದರು.

ADVERTISEMENT

***

ಶಾಲಾ ಶಿಕ್ಷಕನ ಸ್ಥಾನಮಾನ ಕೆಳಮಟ್ಟಕ್ಕಿಳಿದಿರುವ ಬಗ್ಗೆ ರಾಷ್ಟ್ರಪತಿ ವಿಷಾದ

ನವದೆಹಲಿ, ಅ. 30– ಇತ್ತೀಚಿನ ವರ್ಷಗಳಲ್ಲಿ ಶಾಲಾ ಶಿಕ್ಷಕನ ಸ್ಥಾನಮಾನ ತೀರಾ ಕೆಳಮಟ್ಟಕ್ಕಿಳಿದಿರುವುದನ್ನು ರಾಷ್ಟ್ರಪತಿ ವಿ.ವಿ. ಗಿರಿ ಅವರು ಇಂದು ಖಂಡಿಸಿದರು.

ಹಿಂದೆ ಗ್ರಾಮದಲ್ಲಿ ಶಿಕ್ಷಕ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿದ್ದ. ಆದರೆ ಇಂದು ಶಿಕ್ಷಕನ ವೃತ್ತಿಯು ಅದರಲ್ಲೂ ಶಾಲಾ ಮಟ್ಟದಲ್ಲಿ, ಉತ್ತಮ ಯುವಕರನ್ನು ಆಕರ್ಷಿಸುತ್ತಿಲ್ಲವೆಂದು ರಾಷ್ಟ್ರಪತಿ ಅವರು ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.