ADVERTISEMENT

ಗುರುವಾರ, 30–1–1969

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 20:15 IST
Last Updated 29 ಜನವರಿ 2019, 20:15 IST

ಪಾನ ನಿರೋಧ ಮಂಡಳಿ ರಚನೆ: ಸೂಕ್ತ ಸಮಯದಲ್ಲಿ ಪರಿಶೀಲನೆ

ಬೆಂಗಳೂರು, ಜ. 29– ಸಂಪೂರ್ಣವಾಗಿ ಪಾನ ನಿರೋಧವನ್ನು ಜಾರಿಗೆ ತರಲು, ಪಾನ ನಿರೋಧ ಮಂಡಳಿಯನ್ನು ರಚಿಸುವ ವಿಷಯವನ್ನು ಸೂಕ್ತ ಸಮಯದಲ್ಲಿ ಸರಕಾರ ಪರಿಶೀಲಿಸುವುದೆಂದು ಅಬ್ಕಾರಿ ಸಚಿವ ಶ್ರೀ ರಾಮಕೃಷ್ಣ ಹೆಗ್ಡೆ ಅವರು ಇಂದು ವಿಧಾನ ಪರಿಷತ್ತಿನಲ್ಲಿ ಲಿಖಿತ ಉತ್ತರವಿತ್ತರು.

ಯುವಕರು ಕುಡಿಯುವ ದುಶ್ಚಟಕ್ಕೆ ಗುರಿಯಾಗುವುದನ್ನು ತಪ್ಪಿಸಲು, 18 ವರ್ಷದ ಕೆಳಗಿನ ವಯಸ್ಸಿನವರಿಗೆ ಮದ್ಯ ಮಾರಬಾರದೆಂಬ ನಿಷೇಧವಿದೆಯೆಂದೂ, ಮದ್ಯ ಮಾರಾಟ ಮಾಡಲು 18 ವರ್ಷದ ಕೆಳಗಿನ ಮಕ್ಕಳನ್ನು ಕೆಲಸಕ್ಕಿಟ್ಟುಕೊಳ್ಳುವುದನ್ನೂ ನಿಷೇಧಿಸಲಾಗಿದೆಯೆಂದೂ ಸಚಿವರು ಉತ್ತರಿಸಿದರು.

ADVERTISEMENT

ಸರ್ವೋದಯ

ಶಿಕ್ಷಣದ ಬಗ್ಗೆ ಬಾಪೂ ಹೇಳಿದ್ದು: ನಿಜವಾದ ಶಿಕ್ಷಣ ಸ್ವಾವಲಂಬಿ. ಶಿಕ್ಷಣದ ಆರಂಭದಿಂದ ಪೂರ್ಣಾವಸ್ಥೆಯವರೆಗೆ ವಿದ್ಯಾರ್ಥಿಯ ಕೈಗಳು ಕಾರ್ಯಶೀಲ, ಎಲ್ಲ ವಿಧದ ಶಿಕ್ಷಣವನ್ನೂ ಪ್ರಾದೇಶಿಕ ಭಾಷಾ ಮಾಧ್ಯಮದ ಮೂಲಕ ನೀಡಬೇಕು. ವಿಶ್ವದ ಮೂಲಭೂತ ನೀತಿ ಮತ್ತು ತತ್ವಗಳ ಕಲಿಕೆಗೆ ಪೂರ್ಣಾವಕಾಶವಿರಬೇಕು. ವಯಸ್ಕರು, ಮಕ್ಕಳು, ಸ್ತ್ರೀ ಪುರುಷರಲ್ಲಿ ಈ ಶಿಕ್ಷಣ ಯಾರಿಗೆ ಸೀಮಿತವಾಗಿದ್ದರೂ ಮನೆಗಳಲ್ಲಿ ವಿಕಾಸಕ್ಕೆ ಅವಕಾಶವಿದೆ.

ಅಧ್ಯಯನ ಪೂರ್ಣಗೊಳಿಸಿರುವವರು ಮಾತ್ರ ಆಂದೋಳನ ಚಳವಳಿಗಳಿಗೆ ಕೈ ಹಾಕಬಹುದು. ಆದರೆ ಅಭ್ಯಾಸ ನಿರತರಾಗಿರುವಾಗ ಜ್ಞಾನ ಸಂಚಯನವೇ ವಿದ್ಯಾರ್ಥಿಗಳ ಏಕಮೇವ ಉದ್ಯೋಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.