ADVERTISEMENT

50 ವರ್ಷಗಳ ಹಿಂದೆ | ಕಾಂಗ್ರೆಸ್ ಬಿಕ್ಕಟ್ಟು ತಪ್ಪಿಸಲು ಮುಖ್ಯಮಂತ್ರಿಗಳ ಸಭೆ

ಮಂಗಳವಾರ, 11–11–1969

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2019, 20:06 IST
Last Updated 10 ನವೆಂಬರ್ 2019, 20:06 IST
   

ಕಾಂಗ್ರೆಸ್ ಬಿಕ್ಕಟ್ಟು ತಪ್ಪಿಸಲು ಇಂದು ಮುಖ್ಯಮಂತ್ರಿಗಳ ಸಭೆ

‌ನವದೆಹಲಿ, ನ. 10– ಬಿಕ್ಕಟ್ಟಿನಿಂದ ಛಿದ್ರವಾಗಿರುವ ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟನ್ನು ತರಲು ಮೈಸೂರಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಮತ್ತು ಮೋಹನಲಾಲ್ ಸುಖಾಡಿಯಾ ಅವರ ಹೊಸ ಯತ್ನ ಇಲ್ಲಿನ ರಾಜಕೀಯ ವೀಕ್ಷಕರಿಗೆ ಆಶ್ಚರ್ಯವನ್ನುಂಟು ಮಾಡಿದೆ ಯಾದರೂ ಕಾಂಗ್ರೆಸ್ಸಿನ ಇಬ್ಬಣಗಳಲ್ಲೂ ಆಶಾವಾದವನ್ನು ಉಂಟು ಮಾಡಿಲ್ಲ.

ಈ ವಿಷಯದಲ್ಲಿ ಸಿಂಡಿಕೇಟಿನ ಧೋರಣೆ ಮುರಾರಜಿಯವರ ಅಲಕ್ಷ್ಯ ಹೇಳಿಕೆಯಲ್ಲಿ ಪ್ರತಿಬಿಂಬಿತವಾಯಿತು. ಅವರು ಕಾಂಗ್ರೆಸ್ ಅಧ್ಯಕ್ಷರನ್ನು ಭೇಟಿ ಮಾಡಿದ ನಂತರ ಮಾತನಾಡುತ್ತಾ ‘ಮೊದಲೇ ಗೊತ್ತಾದಂತೆ ನಾಳೆ ಸಂಜೆ ನಾಲ್ಕು ಗಂಟೆಗೆ ಕಾರ್ಯಕಾರಿ ಸಮಿತಿ ಸೇರುತ್ತದೆ. ಯಾರಿಗೋ ಅನುಕೂಲವಾಗಲೆಂದು ನಾವು ಗೊತ್ತುಪಡಿಸಿರುವ ಕಾಲವನ್ನು ಏಕೆ ಬದಲಾಯಿಸಬೇಕು?’ ಎಂದರು.

ADVERTISEMENT

ಎಸ್ಸೆನ್‌ಗೆ ಎಚ್ಚರಿಕೆ

ನವದೆಹಲಿ, ನ. 10– ದೆಹಲಿಯ ಏ.ಐ.ಸಿ.ಸಿ. ಸಭೆಗೆ ಮನವಿ ಮಾಡಿಕೊಂಡಿ ರುವವರ ವಿರುದ್ಧ ‘ತಪ್ಪು ಗ್ರಹಿಕೆಯಿಂದ’ ಯಾವುದೇ ಶಿಸ್ತಿನ ಕ್ರಮವನ್ನು ಕಾಂಗ್ರೆಸ್ ಅಧ್ಯಕ್ಷ ನಿಜಲಿಂಗಪ್ಪನವರು ಕೈಗೊಂಡರೆ ಅವರು ಸ್ವಂತ ಜವಾಬ್ದಾರಿಯಿಂದ ಅದನ್ನು ಕೈಗೊಳ್ಳಬೇಕಾಗುತ್ತದೆ ಎಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಡಿ. ಸಂಜೀವಯ್ಯ, ಜಿ.ಎಲ್.ನಂದಾ ಮತ್ತು ಕೃಷ್ಣಕಾಂತ್ ಅವರು ನಿಜಲಿಂಗಪ್ಪನವರಿಗೆ ಪತ್ರವೊಂದನ್ನು ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.