ADVERTISEMENT

ಶನಿವಾರ, 6–7–1968

ವರ್ಷಗಳ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 20:08 IST
Last Updated 5 ಜುಲೈ 2018, 20:08 IST

ಭಾರತದ ವಿರುದ್ಧ ಪಾಕ್ ಪ್ರಚಾರಕ್ಕೆ ಪ್ರತಿಭಟನೆ

ನವದೆಹಲಿ, ಜು. 5– ಪೂರ್ವ ಪಾಕಿಸ್ತಾನದ ಪ್ರತ್ಯೇಕತೆಗಾಗಿ ನಡೆಯಿತೆಂಬ ಒಳಸಂಚಿನಲ್ಲಿ ಭಾರತ ಸೇರಿತ್ತು ಎಂಬ ಪಾಕಿಸ್ತಾನದ ಆಪಾದನೆಗೆ ಭಾರತ ಸರ್ಕಾರವು ಇಂದು ಮತ್ತೆ ದೃಢ ನಿರಾಕರಣೆ ನೀಡಿತು.

ಅಂಥ ಅನಾವಶ್ಯಕ, ಅಯುಕ್ತ ಆಪಾದನೆಗಳಿಂದ ಎರಡೂ ರಾಷ್ಟ್ರಗಳ ಬಾಂಧವ್ಯದಲ್ಲಿ ಬಿಕ್ಕಟ್ಟನ್ನು ಹೆಚ್ಚಿಸುವ ಸಣ್ಣತನವನ್ನು ಪಾಕಿಸ್ತಾನ ಇನ್ನು ಮೇಲಾದರೂ ಕೈಬಿಡುವುದೆಂದು ಭಾರತ ಆಶಿಸಿದೆ.

ADVERTISEMENT

**

12 ರಿಂದ ಮಂಡ್ಯ ಸಕ್ಕರೆ ಕಾರ್ಖಾನೆ ಆರಂಭ

ಮಂಡ್ಯ, ಜು. 5– ಮಂಡ್ಯ ಸಕ್ಕರೆ ಕಾರ್ಖಾನೆ ಇದೇ ಜುಲೈ 12ರಿಂದ ಕಬ್ಬನ್ನು ಅರೆಯಲು ಪ್ರಾರಂಭಿಸುವುದೆಂದು ಕಾರ್ಖಾನೆಯ ಅಧ್ಯಕ್ಷ ಶ್ರೀ ಎಸ್. ನಂಜುಂಡಯ್ಯ ಅವರು ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

**

ಕೈದಿಗಳಿಗೆ ನೇಗಿಲ ಯೋಗಿಯ ದೀಕ್ಷೆ: ಸರ್ಕಾರದ ಪರಿಶೀಲನೆ

ಬೆಂಗಳೂರು, ಜು. 5– ಕೈದಿಗಳ ಕೃಷಿ ವಸಾಹತುವೊಂದನ್ನು ಸ್ಥಾಪಿಸಿ, ಸಜೆಗೆ ಗುರಿಯಾದವರನ್ನು ನೇಗಿಲಯೋಗಿಗಳನ್ನಾಗಿ ಪರಿವರ್ತಿಸಲು ಸರ್ಕಾರ ತೀವ್ರವಾಗಿ ಪರಿಶೀಲಿಸುತ್ತಿದೆ.

ಗೃಹ ಉಪಸಚಿವ ಶ್ರೀ ಮಾಣಿಕರಾವ್ ಪಾಟೀಲ್‌ರವರು ಈ ವಿಷಯವನ್ನು ಇಂದು ಸುದ್ದಿಗಾರರಿಗೆ ಪ್ರಕಟಿಸುತ್ತಾ ‘ಸೆರೆಮನೆಗಳ ಸುಧಾರಣೆಗೆ ಉದ್ದೇಶಿಸಿರುವ ಹಲವು ಯೋಜನೆಗಳಲ್ಲಿ ಇದೂ ಒಂದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.