ADVERTISEMENT

ಶುಕ್ರವಾರ, 18–10–1968

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 17:36 IST
Last Updated 17 ಅಕ್ಟೋಬರ್ 2018, 17:36 IST

ಪ್ರಧಾನಿ ಮನೆ ಎದುರು ಪ್ರಚಂಡ ಪ್ರದರ್ಶನ

ನವದೆಹಲಿ, ಅ. 17– ಇಂದು ಸಂಜೆ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ನಿವಾಸದ ಎದುರು ಐವತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಕೇಂದ್ರ ಸರ್ಕಾರಿ ನೌಕರರ ಅದ್ಭುತ ಮತಪ್ರದರ್ಶನ.

ಇಷ್ಟು ಬೃಹದಾಕಾರದ, ಪರಮೋತ್ಸಾಹದ, ಶಿಸ್ತಿನ ಮತಪ್ರದರ್ಶನ ರಾಜಧಾನಿಯಲ್ಲಿ ಇದೇ ಮೊದಲು ಬಾರಿ.

ADVERTISEMENT

ಸೆಪ್ಟೆಂಬರ್ 19 ರಂದು ಮುಷ್ಕರ ಹೂಡಿದವರ ವಿರುದ್ಧ ಕೈಗೊಳ್ಳಲಾಗಿರುವ ಶಿಸ್ತಿನ ಕ್ರಮಗಳನ್ನೂ, ಅವರಿಗೆ ನೀಡಲಾಗಿರುವ ವಜಾ ನೋಟೀಸ್‌ಗಳನ್ನೂ ಹಿಂದಕ್ಕೆ ಪಡೆಯಬೇಕೆಂಬ ತಮ್ಮ ಬೇಡಿಕೆಗೆ ಬೆಂಬಲವಾಗಿಯೇ ಕೇಂದ್ರ ನೌಕರರ ಈ ಮತ ಪ್ರದರ್ಶನ.

**

ಜಾಕ್ವೆಲಿನ್ ಕೆನೆಡಿಗೆ ಮತ್ತೆ ಮದುವೆ

ನ್ಯೂಯಾರ್ಕ್, ಅ. 17– ದಿವಂಗತ ಅಧ್ಯಕ್ಷ ಕೆನೆಡಿ ಅವರ ಪತ್ನಿ ಜಾಕ್ವೆಲಿನ್ ಕೆನೆಡಿ ಅವರು ಮುಂದಿನ ವಾರ ಗ್ರೀಕ್ ನೌಕಾ ವ್ಯಾಪಾರೋದ್ಯಮಿಯಾದ ಕೋಟ್ಯಧೀಶ ಅರಿಸ್ಟಾಟಲ್ ಸಾಕ್ರಟೀಸ್ ಓನಾಸ್ಸಿನ್ ಅವರನ್ನು ವಿವಾಹವಾಗಲಿದ್ದಾರೆ ಎಂದು ಗುರುವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ.

**

ಜಪಾನಿ ಲೇಖಕನಿಗೆ ನೊಬೆಲ್ ಪ್ರಶಸ್ತಿ

ಸ್ಟಾಕ್‌ಹೊಂ, ಅ. 17– ಜಪಾನಿನ ಯಾಸು ನಾರಿ ಕವಾಬಾತಾ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ 1968ರ ನೊಬೆಲ್ ಪ್ರಶಸ್ತಿ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.