ADVERTISEMENT

ಶುಕ್ರವಾರ, 8–11–1968

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2018, 20:31 IST
Last Updated 7 ನವೆಂಬರ್ 2018, 20:31 IST

ಪ್ರಜಾಸತ್ತೆ ಉಳಿವಿಗಾಗಿ ಭಾರತಕ್ಕೆ ನೆರವು ಮುಂದುವರಿಕೆ ಅಗತ್ಯ: ನಿಕ್ಸನ್

ವಾಷಿಂಗ್‌ಟನ್, ನ. 7– ಭಾರತದಲ್ಲಿ ಪ್ರಜಾಸತ್ತೆಯ ವೈಫಲ್ಯ ವಿಶ್ವವ್ಯಾಪಿ ವಿನಾಶ ಎಂದು ನಿಯೋಜಿತ ಅಧ್ಯಕ್ಷ ರಿಚರ್ಡ್ ನಿಕ್ಸನ್ ನಂಬಿಕೆ ಎಂದು ಯಶಸ್ಸಿನ ಶಿಖರಕ್ಕೇರಿದ ರಿಪಬ್ಲಿಕನ್ ಅಭ್ಯರ್ಥಿಯ ನಿಕಟ ಮೂಲಗಳು ತಿಳಿಸಿವೆ.

ಭಾರತಕ್ಕೆ ಅಮೆರಿಕದ ವಿದೇಶೀ ನೆರವು ಮುಂದುವರಿಯಬೇಕು. ಭಾರತದ ಅಭಿವೃದ್ಧಿ ಶೀಘ್ರಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಭಾರತದ ಮನವೊಲಿಸಬೇಕು ಎಂದು ಅಮೆರಿಕದ 37ನೇ ಅಧ್ಯಕ್ಷರಾಗಿ ಆಯ್ಕೆಯಾದ ನಿಕ್ಸನ್ ಇತ್ತೀಚೆಗೆ ಹೇಳಿದ್ದರು.

ADVERTISEMENT

**

ಗಾಂಧೀ ಪ್ರಣೀತ ತತ್ವಗಳು ಎಲ್ಲ ಕಾಲಕ್ಕೂ ಸರ್ವರಿಂದ ಸ್ಮರಣೀಯ

ಬೆಳಗಾವಿ, ನ. 7– ಇಡೀ ಮಾನವ ಜನಾಂಗದ ಗೌರವ, ಸ್ವಾತಂತ್ರ್ಯಗಳನ್ನು ಎತ್ತಿಹಿಡಿದ ಮಹಾತ್ಮಾ ಗಾಂಧಿಯವರನ್ನು ಭಾರತೀಯರು ಮಾತ್ರವಲ್ಲದೆ ಜಗತ್ತಿನ ಮಾನವಕೋಟಿ ಎಲ್ಲ ಕಾಲದಲ್ಲಿಯೂ ಭಕ್ತಿಯಿಂದ ಸ್ಮರಿಸುವುದೆಂದು ಉಪಪ್ರಧಾನಿ ಶ್ರೀ ಮುರಾರ್ಜಿ ದೇಸಾಯಿ ಅವರು ಇಂದು ಇಲ್ಲಿ ತಿಳಿಸಿದರು.

ಉಪಪ್ರಧಾನಿಗಳು ಇಲ್ಲಿ 56 ಅಡಿ ಎತ್ತರದ ಗಾಂಧಿ ಸ್ತೂಪವನ್ನು ಉದ್ಘಾಟಿಸಿ, ನಾವು ಗಾಂಧೀಜಿಯವರ ಕನಸಿನ ಭಾರತವನ್ನು ನಿರ್ಮಿಸಲು ಶ್ರಮಿಸಬೇಕೆಂದರು.

**

18 ರಂದು ತುಕೋಳ್ ಆಯೋಗ ವರದಿ

ಬೆಂಗಳೂರು, ನ. 7– ರಾಜ್ಯ ನೌಕರರ ವೇತನ ಪರಿಷ್ಕಾರಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಶ್ರೀ ತುಕೋಳ್ ಅವರು ನವಂಬರ್ 18 ರಂದು ತಮ್ಮ ಅಂತಿಮ ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.