ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಭಾನುವಾರ 7.1.1973

​ಪ್ರಜಾವಾಣಿ ವಾರ್ತೆ
Published 6 ಜನವರಿ 2023, 19:45 IST
Last Updated 6 ಜನವರಿ 2023, 19:45 IST
   

ಭಾಷೆ, ಕೋಮು, ಸೋಗಿನ ಶಕ್ತಿಗಳ ದಮನಕ್ಕೆ ಇಂದಿರಾ ಕರೆ

ಮಣಿಪಾಲ್, ಜ. 6– ದೇಶವನ್ನು
ಛಿದ್ರಗೊಳಿಸಲೆತ್ನಿಸುವ ಸಮಾಜವಾದಿ ಶತ್ರುಗಳ ‘ಭಾಷೆ ಮತ್ತು ಕೋಮು’ ಘೋಷಣೆಗಳಿಗೆ ಬಲಿಯಾಗಬಾರದೆಂದು ಪ್ರಧಾನಿ ಇಂದಿರಾ ಗಾಂಧಿಯವರು ಜನತೆಗೆ ಮನವಿ ಮಾಡಿಕೊಂಡಿದ್ದಾರೆ.

ಬದಲಾಗಿ ವಿಚ್ಛಿದ್ರಕಾರಕ ಶಕ್ತಿಗಳ ವಿರುದ್ಧ ಹೋರಾಡುವ ಕಾರ್ಯಕ್ಕೆ ಹೆಚ್ಚು ಗಮನ ನೀಡಿ, ಬಡತನ ತೊಲಗಿಸುವ ತುರ್ತು ಕಾರ್ಯ ಕೈಗೊಳ್ಳಬೇಕಾಗಿದೆ ಎಂದೂ ಅವರು ಸೂಚಿಸಿದ್ದಾರೆ.

ADVERTISEMENT

ಗಂಗಾ–ಕಾವೇರಿ ಸಂಪರ್ಕ ಕಾರ್ಯ
ಸಾಧ್ಯವಲ್ಲದ ಯೋಜನೆ: ಅಭಿಮತ

ನವದೆಹಲಿ, ಜ. 6– ಗಂಗಾ– ಕಾವೇರಿ ಸಂಪರ್ಕ ಯೋಜನೆ ಬಗ್ಗೆ ದೇಶದ ಸುಮಾರು ಹದಿನೈದು ಮಂದಿ ತಜ್ಞರು ಸಂದೇಶ ವ್ಯಕ್ತ
ಪಡಿಸಿದ್ದಾರೆ.

ಆರ್ಥಿಕ, ತಾಂತ್ರಿಕ, ಪರಿಸರ ದೃಷ್ಟಿಯಿಂದ 2265 ಕಿ.ಮೀ. ಕಾಲುವೆ ಮೂಲಕ ಕಾವೇರಿ ಜೊತೆ ಗಂಗಾ ನದಿಗೆ ಸಂಪರ್ಕ ಕಲ್ಪಿಸುವ ಈ ಬೃಹತ್ ಯೋಜನೆ ಸಾಧುವಾದುದಲ್ಲ ಎಂದು ಅವರುಗಳು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.