ADVERTISEMENT

50 ವರ್ಷದ ಹಿಂದೆ: ಬುಧವಾರ 30 ಮೇ 1973

​ಪ್ರಜಾವಾಣಿ ವಾರ್ತೆ
Published 29 ಮೇ 2023, 22:20 IST
Last Updated 29 ಮೇ 2023, 22:20 IST
   

ಮಲೆನಾಡಿನಲ್ಲಿ ಗೇಣಿದಾರರ ಮೇಲೆ ಭೂ ಮಾಲೀಕರ ದೌರ್ಜನ್ಯದ ಆರೋಪ

ಬೆಂಗಳೂರು, ಮೇ 29– ಗೇಣಿದಾರರ ಮೇಲೆ ಮಲೆನಾಡಿನಲ್ಲಿ ಭೂ ಮಾಲೀಕರು ದೌರ್ಜನ್ಯ ನಡೆಸಿದ್ದಾರೆಂದು ಶ್ರೀ ಕೋಣಂದೂರು ಲಿಂಗಪ್ಪ (ಸಮಾಜವಾದಿ) ಅವರು ಇಂದು ವಿಧಾನಸಭೆಯಲ್ಲಿ ಆಪಾದಿಸಿದರು.

ಪೊಲೀಸರು ಭೂ ಮಾಲೀಕರಿಗೆ ಸಹಾಯಕರಾಗಿ ಹೆಂಗಸರು, ಮಕ್ಕಳನ್ನು ಬಂಧಿಸಿದ್ದಾರೆಂದು ಅವರು ಹೇಳಿ ಅದನ್ನು ಸರ್ಕಾರದ ಗಮನಕ್ಕೆ ತಂದರು.

ADVERTISEMENT

ಶ್ರೀ ಹುಚ್ಚಮಾಸ್ತಿಗೌಡ: ವಿವರಗಳನ್ನು ಕಳುಹಿಸಿಕೊಟ್ಟರೆ ಅಧಿಕಾರಿಗಳಿಗೆ ತಿಳಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವೆ.

ಶ್ರೀ ಜಯಪ್ರಕಾಶ್‌ ನಾರಾಯಣ್‌: ಉತ್ತರ ಕನ್ನಡ ಜಿಲ್ಲೆಯಲ್ಲೂ ಅದೇ ಪರಿಸ್ಥಿತಿ, ಒಂದು ಸರ್ಕ್ಯುಲರ್ ಹೊರಡಿಸಿ.

ಸಚಿವರು: ಸರ್ಕ್ಯುಲರ್ ಕಳುಹಿಸಿದೆ. ಜಿಲ್ಲಾಧಿಕಾರಿಗಳೇ ಖುದ್ದು ಪರಿಶೀಲನೆ ಮಾಡಿ ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿ ಮೇಲೆ ಕ್ರಮ ತೆಗೆದುಕೊಂಡು ಗೇಣಿದಾರರು ಪುನಃ ತಮ್ಮ ಜಮೀನಿಗೆ ಹಿಂದಿರುಗುವಂತೆ ಮಾಡಲು ತಿಳಿಸಲಾಗಿದೆ.

ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಇಂದು ಇದರ ಜೊತೆಗೆ ಇನ್ನೂ ಹಲವು ಅಹವಾಲುಗಳು ಬಂದವು.

ಶ್ರೀ ಮಂಜುನಾಥ್‌: ಇನಾಂ ರದ್ದಿಯಾತಿ ಕಾಯ್ದೆ ಜಾರಿಗೆ ಬಂದ ಮೇಲೆ ನಮ್ಮ ತಾಲೂಕಿನಲ್ಲಿ ರೈತರಿಗೆ ಕಿರುಕುಳ ಜಾಸ್ತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.