ಆರ್ಥಿಕ ಸಂಕಷ್ಟ: ನಿರಾಡಂಬರ ಗಣರಾಜ್ಯ ದಿನಾಚರಣೆ
ನವದೆಹಲಿ, ಜ.27– ಆರ್ಥಿಕ ಬಿಕ್ಕಟ್ಟು, ವಿದ್ಯುತ್ ಕೊರತೆ ಮುಂತಾದ ಸಂಕಷ್ಟಗಳ ಕಾರಣ ದೇಶವು ನಿನ್ನೆ ತನ್ನ 25ನೇ ಗಣರಾಜ್ಯೋತ್ಸವವನ್ನು ನಿರಾಡಂಬರವಾಗಿ ಮಿತವ್ಯಯದಲ್ಲಿ ಆಚರಿಸಿತು.
ರಾಜಧಾನಿಯಲ್ಲಿ ಸಡಗರ, ಸಂಭ್ರಮದ ವಾತಾವರಣವಿದ್ದರೂ, ಬಹುಕಾಲದಿಂದ ನಡೆದು ಬಂದಿದ್ದ ಆಡಂಬರ, ವೈಭವದ ಸಾಂಪ್ರದಾಯಿಕ ಅಂಶಗಳು ಲೋಪಿಸಿದ್ದವು. ಆದರೂ, ಸಾವಿರಾರು ಮಂದಿ ಉತ್ಸಾಹಿ ನಾಗರಿಕರು, ಮಾರ್ಗದುದ್ದಕ್ಕೂ ಮತ್ತು ಕೆಂಪುಕೋಟೆಯ ಬಳಿ ನೆರೆದು, ಸಶಸ್ತ್ರ ಸೇನೆ, ಮಿಲಿಟರಿ ಸಂಸ್ಥೆಗಳು, ಪೊಲೀಸ್, ಎನ್‌ಸಿಸಿ ಶಾಲಾ–ಕಾಲೇಜುಗಳ ಸ್ವಯಂಸೇವಕ ದಳಗಳ ಆರು ಸಾವಿರ ಸಿಬ್ಬಂದಿ ಭಾಗವಹಿಸಿದ್ದ ಪರೇಡ್ ಅನ್ನು ವೀಕ್ಷಿಸಿ, ಆನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.