ಸಚಿವ ರಂಗನಾಥ್ ಕಾರಿನ ಮೇಲೆ ಹಲ್ಲೆ: ಅಧಿಕಾರಿಗಳಿಗೆ ಪೆಟ್ಟು
ಬೆಂಗಳೂರು, ಏ. 27– ಇಂದು ಇಲ್ಲಿಗೆ 22 ಮೈಲಿ ದೂರದ ಕಲ್ಲಡ್ಕದಲ್ಲಿ ಆಹಾರ ಧಾನ್ಯ ಸಾಗಣೆ ನಿರ್ಬಂಧದ ವಿರುದ್ಧ ಪ್ರದರ್ಶನ ನಡೆಸಿದ ಜನಸಂಘ ಸ್ವಯಂಸೇವಕರು ಹಿಂಸಾಕೃತ್ಯಗಳಲ್ಲಿ ತೊಡಗಿ ಪುತ್ತೂರಿನಿಂದ ಬರುತ್ತಿದ್ದ ಸಾರಿಗೆ ಸಚಿವ ಕೆ.ಎಚ್. ರಂಗನಾಥ್ ಅವರ ಕಾರಿನ ಮೇಲೆ ಕಲ್ಲು ತೂರಿ ಹಲ್ಲೆ ನಡೆಸಿದರು.
ಕಲ್ಲುತೂರಾಟದಿಂದ ಕಾರಿನ ಗಾಜು ನುಚ್ಚು ನೂರಾಗಿದ್ದು, ಸಚಿವ ರಂಗನಾಥ್ ಆಶ್ಚರ್ಯಕರ ರೀತಿಯಲ್ಲಿ ಅಪಾಯದಿಂದ ಪಾರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.