ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ –ನವೆಂಬರ್‌ 14, 1972

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2022, 19:30 IST
Last Updated 13 ನವೆಂಬರ್ 2022, 19:30 IST
   

ತಮಿಳುನಾಡು ವಿಧಾನಸಭೆವಿಸರ್ಜನೆಗೆ ಸ್ಪೀಕರ್ ಸಲಹೆ:3 ವಾರ ಅಧಿವೇಶನ ಮುಂದಕ್ಕೆ
ಮದ್ರಾಸ್, ನ. 13–
ಉದ್ವಿಗ್ನಭರಿತವಾತಾವರಣದಲ್ಲಿ ಇಂದು ತನ್ನಚಳಿಗಾಲದ ಅಧಿವೇಶನ ಪ್ರಾರಂಭಿಸಿದ ತಮಿಳುನಾಡು ವಿಧಾನಸಭೆಯಲ್ಲಿ ಅಧ್ಯಕ್ಷ ಕೆ.ಎ. ಮತಿಯಳಗನ್ ಅವರು ಜನತೆಯಿಂದ ‘ಹೊಸ ಆದೇಶ’ ಪಡೆಯುವಂತೆ ಅಧಿಕಾರಾರೂಢ ಡಿಎಂಕೆ ಪಕ್ಷಕ್ಕೆ ಸಲಹೆ ನೀಡಿ, ಅತ್ಯಂತ ಅನಿರೀಕ್ಷಿತವಾಗಿ ಡಿಸೆಂಬರ್ 5ರವರೆಗೆ ಮುಂದಕ್ಕೆ ಹಾಕಿದರು.

ಡಿಎಂಕೆ ಖಜಾಂಚಿ ಸ್ಥಾನದಿಂದ ತೆಗೆದು ಹಾಕಲಾದುದರಿಂದ ರಾಜಕೀಯ ಬಿಕ್ಕಟ್ಟಿನ ಕಿಡಿ ಹೊತ್ತಿಕೊಂಡಿದೆ. ಎಂ.ಜಿ. ರಾಮಚಂದ್ರನ್ ಅವರು ಎತ್ತಿದ ಒಂದು ಕ್ರಿಯಾಲೋಪದ ಮೇಲೆ ಅಧ್ಯಕ್ಷರು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರಿಗೆ ಸಭೆಯನ್ನು ವಿಸರ್ಜಿಸಿ ಜನತೆಯಿಂದ ಹೊಸ ಆದೇಶ ಪಡೆಯುವ ಮೂಲಕ
‘ಈ ವಿಶೇಷ ಪರಿಸ್ಥಿತಿಗೆ ವಿಶೇಷ ಪರಿಹಾರ’ ಕಂಡುಹಿಡಿಯುವಂತೆ ಸೂಚಿಸಿದರು.

ಮೂರು ಬೃಹತ್ ಯೋಜನೆಗೆ90 ಕೋಟಿ ರೂ. ವಿಶೇಷ ನೆರವು:ಕೇಂದ್ರಕ್ಕೆ ರಾಜ್ಯದ ಮನವಿ
ನವದೆಹಲಿ, ನ. 13–
ಮೂರು ದೊಡ್ಡ ನೀರಾವರಿ ಯೋಜನೆಗಳನ್ನು ಪೂರ್ಣ ಮಾಡುವುದಕ್ಕಾಗಿ 90 ಕೋಟಿ ರೂಪಾಯಿ ಗಳ ವಿಶೇಷ ನೆರವು ನೀಡುವಂತೆ ಕೇಂದ್ರ ಸರ್ಕಾರವನ್ನು ಮೈಸೂರು ಸರ್ಕಾರಕೋರಿದೆ.

ADVERTISEMENT

‘ಈ ಯೋಜನೆಗಳನ್ನು ಪೂರ್ಣ ಮಾಡುವುದಕ್ಕೆ 207 ಕೋಟಿ ರೂಪಾಯಿಗಳುಬೇಕು’ ಎಂದು ಮೈಸೂರು ರಾಜ್ಯದ ನೀರಾವರಿ ಖಾತೆಯ ಸ್ಟೇಟ್ ಸಚಿವ ಶ್ರೀ ಎಚ್‌.ಎನ್. ನಂಜೇಗೌಡ ಅವರುಪತ್ರಕರ್ತರಿಗೆ ತಿಳಿಸಿದರು.

ಕೃಷ್ಣಾ ಮೇಲ್ದಂಡೆ, ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳನ್ನು ಪೂರ್ಣ ಮಾಡುವುದರಿಂದ ಮೈಸೂರು ರಾಜ್ಯದ ಉತ್ತರ ಭಾಗದ ಅತ್ಯಂತ ಬೆಂಗಾಡು ಪ್ರದೇಶಕ್ಕೆ ತುಂಬಾ ಲಾಭದಾಯಕವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.