50 ವರ್ಷಗಳ ಹಿಂದೆ
ನಾಯಕತ್ವ ಪ್ರಶ್ನೆ: ದೆಹಲಿ ಮಾತುಕತೆ ಬಗ್ಗೆ ಅರಸು ತೃಪ್ತಿ
ಬೆಂಗಳೂರು: ರಾಜ್ಯದ ರಾಜಕೀಯ ಪರಿಸ್ಥಿತಿ, ಅದರಲ್ಲೂ ನಾಯಕತ್ವದ ಪ್ರಶ್ನೆ ಕುರಿತು ದೆಹಲಿಯಲ್ಲಿ ಕೇಂದ್ರದ ನಾಯಕರೊಡನೆ ನಡೆಸಿದ ಮಾತುಕತೆಯಿಂದ ತಮಗೆ ಸಂತೃಪ್ತಿಯಾಗಿದೆಯೆಂಬ ಸೂಚನೆಯನ್ನು ಮುಖ್ಯಮಂತ್ರಿ ದೇವರಾಜ ಅರಸು ಅವರು ಇಂದು ಇಲ್ಲಿ ನೀಡಿದರು.
ದೆಹಲಿಗೆ ಐದು ದಿನಗಳ ಭೇಟಿಯ ನಂತರ ಇಂದು ನಗರಕ್ಕೆ ಹಿಂದಿರುಗಿದ ಮುಖ್ಯಮಂತ್ರಿಯವರು ತಾವು ದೆಹಲಿಗೆ ತೆರಳುವ ಮುನ್ನ ಸಂಶಯದ ವಾತಾವರಣ ನಿರ್ಮಾಣವಾಗಿದ್ದು ಏನೇನೋ ವದಂತಿಗಳನ್ನು ಹರಡಲಾಗಿತ್ತೆಂದು ಹೇಳಿ ‘ದೆಹಲಿಗೆ ಹೋದಮೇಲೆ ಈ ವದಂತಿಗಳಿಗೆ ಆಧಾರವಿಲ್ಲವೆಂದು ಗೊತ್ತಾಯಿತು’ ಎಂದರು.
***
ರಾಜ್ಯದಲ್ಲಿ ಮೂವರ ಸಮಿತಿ ರಚನೆ
ಬೆಂಗಳೂರು: ಕರ್ನಾಟಕದಲ್ಲಿ ಚಳವಳಿ ಸಂಘಟಿಸಲು ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣ್ ಅವರು ಮೂವರ ವ್ಯವಸ್ಥಾ ಸಮಿತಿಯೊಂದನ್ನು ರಚಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆಯವರು ಸಂಚಾಲಕರಾಗಿರುವ ಈ ಸಮಿತಿಯಲ್ಲಿ ಕಡಿದಾಳ್ ಮಂಜಪ್ಪ ಮತ್ತು ಪಿ. ವೆಂಕೋಬರಾವ್ ಅವರು ಸದಸ್ಯರು. ರಾಜ್ಯದಲ್ಲಿ 4 ದಿನಗಳ ಪ್ರವಾಸದ ನಂತರ ನಗರ ಬಿಡುವ ಮುನ್ನ ಜಯಪ್ರಕಾಶ ನಾರಾಯಣ್ ಅವರು ಈ ಸಮಿತಿ ರಚನೆ ಪ್ರಕಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.