ವಾಣೀವಿಲಾಸ ಸಾಗರಕ್ಕೆ ಸೋಮವಾಹಿನಿ ನೀರು: ಯೋಜನೆಗೆ ಒಪ್ಪಿಗೆ
ಬೆಂಗಳೂರು, ಮೇ 21: ಏಷ್ಯದಲ್ಲೇ ಪ್ರಥಮ ಅಣೆಕಟ್ಟೆ, ತನ್ನ 73 ವರ್ಷಗಳ ಅಸ್ತಿತ್ವದಲ್ಲಿ ತುಂಬಿದ್ದೇ ಒಂದು ಬಾರಿ, ಅದೂ ಅರವತ್ತು ವರ್ಷಗಳ ಹಿಂದೆ. ನಿರಂತರ ಕೊರತೆಯ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ವಾಣೀವಿಲಾಸ ಸಾಗರಕ್ಕೆ ನೀರು ತುಂಬಿಸಲು ಈಗ ಪ್ರಯತ್ನ.
ಭಾರಿ ನೀರಾವರಿ ಯೋಜನೆಗಳ ನಿಯಂತ್ರಣ ಮಂಡಳಿ ಇಂದು ಕೈಗೊಂಡ ನಿರ್ಧಾರ ಕಾರ್ಯಗತವಾದಾಗ ವರ್ಷದಲ್ಲಿ ಸಾಕಷ್ಟು ಕಾಲ ಒಣಗಿರುವ ವಾಣೀವಿಲಾಸ ಸಾಗರದ ಅಚ್ಚುಕಟ್ಟಿನ ಸುಮಾರು ಇಪ್ಪತ್ತೈದು ಸಾವಿರ ಎಕರೆಗೆ ಖಚಿತ ನೀರು ಸರಬರಾಜಾಗುವುದರ ಜೊತೆಗೆ ಮತ್ತೆ ಸುಮಾರು ಎಪ್ಪತ್ತು ಸಾವಿರ ಎಕರೆಗೆ ನೀರು ಸಿಕ್ಕಲಿದೆ.
***
ಗೌರಿಶಂಕರ ಸ್ವಾಮಿ ಸಿದ್ಧಗಂಗಾ ಮಠದ ಉತ್ತರಾಧಿಕಾರಿ
ಸಿದ್ಧಗಂಗೆ, ಮೇ 21: ನಾಲ್ಕು ದಿಕ್ಕುಗಳಿಂದಲೂ ಒಂದೇ ಸಮನೆ ಆಗಮಿಸುತ್ತಿದ್ದ ಸಹಸ್ರ ಸಹಸ್ರ ಸಂಖ್ಯೆಯ ಭಕ್ತವೃಂದದ ಜಯಘೋಷ ಮುಗಿಲು ಮುಟ್ಟುತ್ತಿದ್ದಂತೆ ಇಂದು ಬ್ರಾಹ್ಮೀ ಮುಹೂರ್ತದಲ್ಲಿ 28 ವರ್ಷ ವಯಸ್ಸಿನ ಕಾಲೇಜು ಲೆಕ್ಚರರ್ ಜಗದೀಶ್ ಅವರು ಶ್ರೀ ಗೌರಿಶಂಕರ ಸ್ವಾಮಿಗಳು ಎಂಬ ನೂತನ ಹೆಸರಿನೊಂದಿಗೆ ವಿಧಿವತ್ತಾಗಿ ಶ್ರೀ ಸಿದ್ಧಗಂಗಾ ಮಠದ ಉತ್ತರಾಧಿಕಾರಿಗಳಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.