50 ವರ್ಷಗಳ ಹಿಂದೆ
ಹುಬ್ಬಳ್ಳಿ– ಧಾರವಾಡ ಕಾರ್ಪೊರೇಷನ್ ರದ್ದಿಗೆ ಷೋಕಾಸ್ ನೋಟಿಸ್
ಬೆಂಗಳೂರು, ಮೇ 22– ಹುಬ್ಬಳ್ಳಿ– ಧಾರವಾಡ ನಗರ ಕಾರ್ಪೊರೇಷನ್ ಅನ್ನು ಏಕೆ ರದ್ದು ಮಾಡಬಾರದೆಂದು ವಿವರಣೆ ಕೇಳಿ ಸರ್ಕಾರ ಷೋಕಾಸ್ ನೋಟಿಸ್ ನೀಡಿದೆಯೆಂದು ಅಧಿಕೃತವಾಗಿ ತಿಳಿದುಬಂದಿದೆ.
ಆಡಳಿತ ನಿರ್ವಹಣೆಯಲ್ಲಿ ನಗರಸಭೆ ಆಡಳಿತ ತನ್ನ ಕರ್ತವ್ಯಲೋಪ ಮಾಡಿದೆಯೆಂದು ಹಲವು ಆಪಾದನೆಗಳನ್ನು ನೋಟಿಸಿನಲ್ಲಿ ಸೇರಿಸಲಾಗಿದೆ ಎಂದು ಗೊತ್ತಾಗಿದೆ.
ಹುಬ್ಬಳ್ಳಿ– ಧಾರವಾಡ ನಗರಸಭೆಯ ಮಾಜಿ ಮೇಯರ್ ಬೆಂಗಳೂರಿನ ಅವರು ಅಧಿಕಾರದಲ್ಲಿ ಮುಂದುವರೆದ ಪ್ರಸಂಗ ಶಾಸನಸಭೆಯಲ್ಲಿ ವಿಪರೀತ ಟೀಕೆಗಳಿಗೆ ಅವಕಾಶ ನೀಡಿದ ಮೇಲೆ ಚುನಾವಣೆಯನ್ನು ನಡೆಸಲಾಗಿದ್ದು, ವಿರೋಧ ಪಕ್ಷದ ಮಥಿಯಾಸ್ ಅವರು 9 ತಿಂಗಳ ಅವಧಿಗೆ ಮಾತ್ರ ಮೇಯರ್ ಆಗಿ ಆಯ್ಕೆಯಾದರು. ಜೂನ್ 3ರಂದು ಹೊಸ ಮೇಯರ್ ಆಯ್ಕೆ ನಡೆಯಬೇಕಾಗಿದೆ.
***
ಸದ್ಯದಲ್ಲೇ ಕೃತಕ ಮಳೆ ಕಾರ್ಯಾರಂಭ
ಬೆಂಗಳೂರು, ಮೇ 22– ಲಿಂಗನಮಕ್ಕಿ ಜಲಾಶಯಕ್ಕೆ ನೀರು ಬರುವ ಪ್ರದೇಶದಲ್ಲಿ ಕೃತಕ ಮಳೆ ಬರಿಸುವ ಯತ್ನ ಸದ್ಯದಲ್ಲೇ ಪ್ರಾರಂಭವಾಗಲಿದೆ.
ಈಗಾಗಲೇ ವಿದ್ಯುತ್ ಮಂಡಳಿಯ ವಿಶೇಷಾಧಿಕಾರಿಗಳು ಸಂಬಂಧಪಟ್ಟವರೊಡನೆ ಮಾತುಕತೆ ನಡೆಸಲು ಮುಂಬಯಿ ಮತ್ತು ಪೂನಾಕ್ಕೆ ತೆರಳಿದ್ದಾರೆ. ಖಾಸಗಿ ವಿಮಾನವನ್ನು ಅದಕ್ಕಾಗಿ ಪಡೆಯುವ ಯತ್ನ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.