ADVERTISEMENT

50 ವರ್ಷಗಳ ಹಿಂದೆ | ಭಾನುವಾರ, 19 ನವೆಂಬರ್‌ 1972

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 20:55 IST
Last Updated 18 ನವೆಂಬರ್ 2022, 20:55 IST
   

ಪಾಕ್‌ನಿಂದ ಆಧಾರರಹಿತ ಆಪಾದನೆ: ಭಾರತದ ನಿರಾಕರಣೆ
ದೆಹಲಿ, ನವೆಂಬರ್‌ 18–
ಭಾರತ–ಪಾಕಿಸ್ತಾನದ ಗಡಿಯುದ್ದಕ್ಕೂ ಭಾರತವು ಬೇಕೆಂದೇ ಉದ್ವೇಗ, ಬಿಕ್ಕಟ್ಟುಗಳನ್ನು ಹೆಚ್ಚಿಸುತ್ತಿದೆಯೆಂಬ ಹಾಗೂ ಭಾರತದ ಪಡೆಗಳು ಕಳೆದ ಕೆಲವು ದಿನಗಳಲ್ಲಿ ಅನೇಕ ಬಾರಿ ಗಡಿಯನ್ನು ಉಲ್ಲಂಘಿಸಿವೆ ಎಂಬ ಪಾಕಿಸ್ತಾನದ ಆಪಾದನೆ ನಿರಾಧಾರ ಹಾಗೂ ಕಿಡಿಗೇಡಿತನದ್ದೆಂದು ಅಧಿಕೃತ ವಲಯಗಳು ಇಂದು ಇಲ್ಲಿ ತಿಳಿಸಿದವು.

ಕಾಶ್ಮೀರದ ಹಾಜಿರ್‌ ಕ್ಷೇತ್ರದಲ್ಲಿಭಾರತದ ಪಡೆಗಳು ಅನೇಕ ಬಾರಿ ಗಡಿ ಉಲ್ಲಂಘಿಸಿವೆ ಎಂದೂ ಕಳೆದ ಗುರುವಾರ ಪಂಜಾಬಿನಲ್ಲಿನ ಸುಲೇಮಾನ್‌ಕಿ ಕ್ಷೇತ್ರದಲ್ಲಿನ ಪಾಕಿಸ್ತಾನಿ ನೆಲೆಗಳ ಮೇಲೆ ಭಾರತದ ಪಡೆಗಳು ಗುಂಡು ಹಾರಿಸಿದವೆಂದೂ ಪಾಕಿಸ್ತಾನ ಸರ್ಕಾರದ ವಕ್ತಾರರು ಆಪಾದಿಸಿದ್ದಾರೆಂದು ಇಸ್ಲಾಮಾಬಾದ್‌ನಿಂದ ಯು.ಪಿ.ಐ ವರದಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT