ADVERTISEMENT

50 ವರ್ಷಗಳ ಹಿಂದೆ: ಶನಿವಾರ, 23–1–1971

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 19:30 IST
Last Updated 22 ಜನವರಿ 2021, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ವರ್ಣಭೇದ ನೀತಿ ಅನುಸರಿಸುವ ರಾಷ್ಟ್ರಗಳಿಗೆ ಎಲ್ಲ ನೆರವನ್ನೂ ನಿರಾಕರಿಸಲು ದೃಢ ನಿರ್ಧಾರ

ಸಿಂಗಪುರ, ಜ. 22– ವರ್ಣದ್ವೇಷ ನೀತಿಯನ್ನು ಅನುಸರಿಸುವ ರಾಷ್ಟ್ರಗಳಿಗೆ ಯಾವ ಬಗೆಯ ನೆರವನ್ನೂ ನೀಡದಿರಲು ಕಾಮನ್‌ವೆಲ್ತ್‌ ಒಕ್ಕೂಟಕ್ಕೆ ಸೇರಿದ 31 ರಾಷ್ಟ್ರಗಳು ಇಂದು ದೃಢ ನಿರ್ಧಾರ ಕೈಗೊಂಡವು.

ಸಮಾಜ ಕಂಟಕವಾದ ವರ್ಣದ್ವೇಷ ನೀತಿಯು ಮಾನವ ಜನಾಂಗದ ಪುರೋಭಿವೃದ್ಧಿಗೆ ಮಾರಕವಾದುದು ಎಂದು ಪರಿಗಣಿಸಿ, ‘ಇಂತಹ ಪ್ರವೃತ್ತಿ ಎಲ್ಲೇ ಕಂಡುಬಂದರೂ ಅದನ್ನು ದಮನಗೊಳಿಸಲು ನಾವು ಯತ್ನಿಸುತ್ತೇವೆ’ ಎಂದು ಈ ರಾಷ್ಟ್ರಗಳ ನಾಯಕರು ಘೋಷಿಸಿದರು.

ADVERTISEMENT

ಬೆಂಗಳೂರಿನಿಂದ ಲೋಕಸಭೆಗೆ ಅಡಿಗರ ಸ್ಪರ್ಧೆ

ಮಂಗಳೂರು, ಜ. 22– ಬೆಂಗಳೂರು ನಗರ ಕ್ಷೇತ್ರದಿಂದ ಕನ್ನಡದ ಖ್ಯಾತ ಕವಿ ಪ್ರೊ. ಗೋಪಾಲಕೃಷ್ಣ ಅಡಿಗ ಅವರು ಜನಸಂಘದ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸುತ್ತಾರೆಂದು ಭಾರತೀಯ ಜನಸಂಘದ ಕರ್ನಾಟಕ ಪ್ರಾಂತೀಯ ಸಮಿತಿಯ ಸಂಘಟನಾ ಕಾರ್ಯದರ್ಶಿ ಶ್ರೀ ಭಾವೂರಾವ್‌ ದೇಶಪಾಂಡೆ ಅವರು ಇಂದು ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.