ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ 2–3–1971

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 19:30 IST
Last Updated 1 ಮಾರ್ಚ್ 2021, 19:30 IST
   

ಸರೋಜಿನಿ ಮಹಿಷಿ ಅವರ ಸೋಲಿಗಾಗಿ ವಿಶ್ವಪ್ರಯತ್ನ

ಧಾರವಾಡ, ಮಾರ್ಚ್‌ 1– ಗೆಲ್ಲಲೇಬೇಕೆಂಬ ವಿಶ್ವಪ್ರಯತ್ನ– ಸೋಲಿಸಲೇಬೇಕೆಂಬ ಜಿದ್ದಿನ ನಡುವೆ ಹೋರಾಟ
ನಡೆಯುತ್ತಿರುವ ಧಾರವಾಡ ಉತ್ತರ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಪ್ರಮಾಣದಲ್ಲಿನ ಮತದಾನವು ಆಡಳಿತ ಕಾಂಗ್ರೆಸ್ ಅಭ್ಯರ್ಥಿಯಜಯಕ್ಕೆ ಕಾರಣವಾಗುವ ಸಂಭವವಿದೆ.

ಕೇಂದ್ರ ಸರ್ಕಾರದ ಉಪಸಚಿವೆಡಾ. ಸರೋಜಿನಿ ಮಹಿಷಿ ಹಾಗೂಸಂಸ್ಥಾ ಕಾಂಗ್ರೆಸ್ಸಿನ ಶ್ರೀ ಆರ್.ಜಿ.ವಾಲಿ ಅವರುಗಳ ನಡುವೆ ಸ್ಪರ್ಧೆಯಿರುವ ಕ್ಷೇತ್ರದಲ್ಲಿ ಆಡಳಿತ ಕಾಂಗ್ರೆಸ್ಸಿಗರುಈ ನಿರೀಕ್ಷೆಯಿಂದ ಪ್ರಯತ್ನ
ಮಾಡುತ್ತಿದ್ದಾರೆ.

ADVERTISEMENT

ಏಳು ರಾಜ್ಯಗಳಲ್ಲಿಶಾಂತಿಯುತ ಮತದಾನ

ನವದೆಹಲಿ, ಮಾರ್ಚ್‌ 1– ಲೋಕಸಭೆಯ 101 ಕ್ಷೇತ್ರಗಳಲ್ಲಿ ಸಂಪೂರ್ಣವಾಗಿಮತ್ತು ಇತರೆ 79 ಕ್ಷೇತ್ರಗಳ ಕೆಲವೆಡೆ ಮೊದಲ ಹಂತದ ಚುನಾವಣೆಯಲ್ಲಿಇಂದು ಮತದಾನ ಮುಕ್ತಾಯವಾಯಿತು.

ಬಿಹಾರದಲ್ಲಿ ಕೆಲವೆಡೆ ಘರ್ಷಣೆ, ಮತಪೆಟ್ಟಿಗೆ ಕಳವು, ಎರಡು ಸಾವು; ಭೋಪಾಲ್‌ನಲ್ಲಿ ನಡೆದ ಘರ್ಷಣೆಯಲ್ಲಿ ನಾಲ್ವರಿಗೆ ಗಾಯ ಮುಂತಾದ ಸಣ್ಣಪುಟ್ಟ ಘಟನೆಗಳ ವಿನಾ ಉಳಿದೆಡೆ ಸಾಮಾನ್ಯವಾಗಿ ಶಾಂತಿಯುತವಾಗಿಯೇ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.