ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ 13.4.1971

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 20:44 IST
Last Updated 12 ಏಪ್ರಿಲ್ 2021, 20:44 IST
   

ಸಂಸ್ಥಾ ಕಾಂಗ್ರೆಸ್ ಪಕ್ಷದ ಸರ್ಕಾರ ಅಸಂಭವ

ಬೆಂಗಳೂರು, ಏ. 12– ಸ್ವಶಕ್ತಿಯ ಮೇಲೆ ಮತ್ತೆ ಸರ್ಕಾರ ರಚಿಸಲು ಪ್ರಯತ್ನಿಸುತ್ತಿರುವ ಸಂಸ್ಥಾ ಕಾಂಗ್ರೆಸ್ ಪಕ್ಷ ಈ ಪ್ರಯತ್ನವನ್ನು ಕೈಬಿಡುವ ಸಂಭವ ಹೆಚ್ಚಾಗಿದೆ.

ಅಲ್ಪಸಂಖ್ಯಾತ ಸರ್ಕಾರ ರಚಿಸುವ ತಂಡದ ನಿರ್ಧಾರ ಹಾಗೂ ತಮ್ಮ ಪಕ್ಷದ ಅಂದಾಜು ಆಲೋಚನೆಗಳಿಗೆ ಸಾಮರಸ್ಯ ಉಂಟಾಗದಿರುವ ಪರಿಸ್ಥಿತಿಯನ್ನು ವಿಮರ್ಶಿಸಿ ಪಕ್ಷದ ನಾಯಕ ಶ್ರೀ ವೀರೇಂದ್ರ ಪಾಟೀಲ್ ಅವರು ರಾತ್ರಿ ನಿರ್ಧಾರಕೈಗೊಳ್ಳಲಿದ್ದಾರೆ.

ADVERTISEMENT

ತಾವು ಮಂತ್ರಿಮಂಡಲವನ್ನು ರಚಿಸು ವುದಿಲ್ಲವೆಂದು ಶ್ರೀ ಪಾಟೀಲರು ನಾಳೆ ತಿಳಿಸಿದಲ್ಲಿ ರಾಜ್ಯಪಾಲರು ವಿಧಾನಸಭೆಯನ್ನು ವಿಸರ್ಜಿಸಲು ರಾಷ್ಟ್ರಪತಿಗೆ ಶಿಫಾರಸು ಮಾಡಲಿದ್ದಾರೆ.

ಜನಸಂಖ್ಯೆ 54 ಕೋಟಿ

ನವದೆಹಲಿ, ಏ. 12– ಈ ವರ್ಷದ ಜನಗಣತಿ ಪ್ರಕಾರ, ಭಾರತದ ಜನಸಂಖ್ಯೆ ಐವತ್ನಾಲ್ಕು ಕೋಟಿ ಎಪ್ಪತ್ತು ಲಕ್ಷ.

1971ರ ಜನಗಣತಿ ಪ್ರಕಾರ, ರಾಷ್ಟ್ರದಲ್ಲಿ ಉತ್ತರ ಪ್ರದೇಶವು ಅತ್ಯಂತ ಹೆಚ್ಚು ಜನಭರಿತ ರಾಜ್ಯವಾಗಿದ್ದು, ಅದರ ಜನಸಂಖ್ಯೆ 8,82,99,453.

ಹೆಚ್ಚು ಜನಸಂಖ್ಯೆ ಪಡೆದಿರುವ ಇತರ ರಾಜ್ಯಗಳ ಪೈಕಿ ಮೈಸೂರು ರಾಜ್ಯವು 8ನೇ ಸ್ಥಾನ ಪಡೆದಿದ್ದು, ಅದರ ಜನಸಂಖ್ಯೆ 2,92,24,046.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.