ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ: ಮಂಗಳವಾರ 11.4.1972

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2022, 16:04 IST
Last Updated 10 ಏಪ್ರಿಲ್ 2022, 16:04 IST
   

ಬಹುಮತದಿಂದ ಸಭಾಪತಿಯಾಗಿ ಗಾಂವ್‌ಕರ್ ಆಯ್ಕೆ

ಬೆಂಗಳೂರು, ಏ. 10– ಬಹುಮತ ಪಡೆದ 45 ವರ್ಷದ ಸಂಸ್ಥಾ ಕಾಂಗ್ರೆಸ್ಸಿನ ಸ್ಪರ್ಧಿ ಮಾಜಿ ಉಪಸಭಾಪತಿ ಶ್ರೀ ಎಸ್‌.ಡಿ. ಗಾಂವ್‌ಕರ್ ಅವರು ಇಂದು ವಿಧಾನ ಪರಿಷತ್ತಿನ ಸಭಾಪತಿಗಳಾಗಿ ಬಹುಮತದಿಂದ ಚುನಾಯಿತರಾದರು.

ಅವರ ಹೆಸರನ್ನು ಸೂಚಿಸಿದ ನಿರ್ಣಯವನ್ನು ಸಭಾಧ್ಯಕ್ಷತೆಯನ್ನು ವಹಿಸಿ, ಚುನಾವಣೆ ನಡೆಸಿದ ಉಪಸಭಾಪತಿ ಶ್ರೀ ಎಸ್‌.ಪಿ. ರಾಜಣ್ಣ ಅವರು, ಮತಕ್ಕೆ ಹಾಕಲಾಗಿ ಅವರ ಪರವಾಗಿ 32 ಮತಗಳೂ, ವಿರುದ್ಧವಾಗಿ 24 ಮತಗಳೂ ಬಂದವು.

ADVERTISEMENT

ಶ್ರೀ ಗಾಂವ್‌ಕರ್ ಅವರು ಸಭಾಪತಿಗಳಾಗಿ ಆಯ್ಕೆಯಾದ ಪ್ರಯುಕ್ತ ಕಾಂಗ್ರೆಸ್ ಬೆಂಬಲದೊಡನೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀ ಎಂ.ವಿ. ರಾಮರಾಯರ ಹೆಸರನ್ನು ಸೂಚಿಸಿದ ನಿರ್ಣಯವನ್ನು ಮತಕ್ಕೆ ಹಾಕಲಿಲ್ಲ.

ಗುರುವಿಗೆ ಪರಮಾನಂದ

ಬೆಂಗಳೂರು, ಏ. 10– ಶಿಷ್ಯ ಉನ್ನತ ಸ್ಥಾನವನ್ನಲಂಕರಿಸಿದ್ದನ್ನು ಕಂಡ ಗುರುವಿಗೆ ಪರಮಾನಂದ.

ಶ್ರೀ ಎಸ್.ಡಿ. ಗಾಂವ್‌ಕರ್ ನೂತನ ಸಭಾಪತಿಗಳಾಗಿ ಆಯ್ಕೆ ಆಗಿ ಆ ಸ್ಥಾನವನ್ನು ಅಲಂಕರಿಸಿದಾಗ, ವಿದ್ಯಾಗುರು ಶ್ರೀ ಎಂ.ಜಿ. ಹಂದ್ರಾಳ ಅವರಿಂದ ಆಶೀರ್ವಾದ.

ಶ್ರೀ ಗಾಂವ್‌ಕರ್ ಅವರು 10 ವರ್ಷದವರಿದ್ದಾಗ ಶ್ರೀ ಹಂದ್ರಾಳ ಅವರು ವಿದ್ಯಾಗುರುವಾಗಿದ್ದರು. ಶ್ರೀ ಗಾಂವ್‌ಕರ್ ಅವರು ಆಗಲೇ ಚೂಟಿಯಿಂದ ಇದ್ದುದನ್ನು ಗುರು ಕಂಡುಕೊಂಡಿದ್ದರು.

ವಿದ್ಯಾರ್ಥಿ ತಮ್ಮ ಮುಂದೆಯೇ, ಉನ್ನತ ಸ್ಥಾನಕ್ಕೆ ಏರಿರುವುದು ತಮಗೆ ಅಭಿಮಾನ, ಆನಂದ ಉಂಟಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.