ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ 25, ಮೇ 1971

​ಪ್ರಜಾವಾಣಿ ವಾರ್ತೆ
Published 24 ಮೇ 2021, 19:45 IST
Last Updated 24 ಮೇ 2021, 19:45 IST
   

ರೈಲು ಪ್ರಯಾಣ, ಸರಕು ಸಾಗಣೆ ದರದಲ್ಲಿ ಏರಿಕೆ

ನವದೆಹಲಿ, ಮೇ 24– ರೈಲ್ವೆ ಸಚಿವ ಶ್ರೀ ಕೆ. ಹನುಮಂತಯ್ಯ ಅವರು 1971–72ನೇ ಸಾಲಿಗೆ ರೈಲ್ವೆ ಇಲಾಖೆಗೆ 26.25 ಕೋಟಿ ರೂ. ಹೆಚ್ಚಿನ ಆದಾಯ ಬರುವಂತೆ ಕೆಲವು ಆಯ್ದ ಸರಕುಗಳ ಸಾಗಣೆ ಮತ್ತು ಪ್ರಯಾಣ ದರದಲ್ಲಿ ಏರಿಕೆಯನ್ನು ಸೂಚಿಸಿರುವರು.

ಇಂದು ಲೋಕಸಭೆಯಲ್ಲಿ ಅವರು ರೈಲ್ವೆ ಮುಂಗಡ ಪತ್ರ ಮಂಡಿಸಿದರು. ಈ ಹಿಂದೆ ತಾತ್ಕಾಲಿಕ ಮುಂಗಡ ಪತ್ರದಲ್ಲಿ ಸೂಚಿಸಿದ್ದ 33.12 ಕೋಟಿ ರೂ.ಗಳ ಖೋತಾವನ್ನು ಈಗಿನ ಮುಂಗಡ ಪತ್ರದಲ್ಲಿ 6.87 ಕೋಟಿ ರೂ.ಗೆ ಇಳಿಸಲಾಗಿದೆ.

ADVERTISEMENT

ಪ್ರಯಾಣ ದರ ಏರಿಕೆ: 16ರಿಂದ 30 ಕಿ.ಮೀ.ವರೆಗೆ ಮೂರನೇ ದರ್ಜೆ (ಪ್ಯಾಸೆಂಜರ್) ದರದಲ್ಲಿ ಐದು ಪೈಸೆ, ಮೇಲ್ ಅಥವಾ ಎಕ್ಸ್‌ಪ್ರೆಸ್‌ನಲ್ಲಿ 15 ಪೈಸೆ ಏರಿಸಲಾಗಿದೆ. 30ರಿಂದ 50 ಕಿ.ಮೀ. ದೂರಕ್ಕೆ 10 ಮತ್ತು 20 ಪೈಸೆ ಏರಿಸಲಾಗಿದೆ. 200 ಕಿ.ಮೀ. ದೂರಕ್ಕೆ ಮೂರನೇ ದರ್ಜೆಯಲ್ಲಿ ಪರಮಾವಧಿ ಏರಿಕೆ ಎಂದರೆ 25 ಪೈಸೆ ಮಾತ್ರ.

ರಾಜ್ಯದಲ್ಲಿ ಇನ್ನೂ ಆರು ತಿಂಗಳು ರಾಷ್ಟ್ರಪತಿ ಆಡಳಿತ

ನವದೆಹಲಿ, ಮೇ 24– ಮೈಸೂರು ರಾಜ್ಯ ದಲ್ಲಿ ಮೇ 27ರಿಂದ ಇನ್ನೂ ಆರು ತಿಂಗಳ ತನಕ ರಾಷ್ಟ್ರಪತಿ ಆಡಳಿತ ವಿಸ್ತರಣೆಗೆ ಲೋಕಸಭೆ ಇಂದು ಒಪ್ಪಿಗೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.