ADVERTISEMENT

50 ವರ್ಷಗಳ ಹಿಂದೆ | ಕಪ್ಪುಹಣದ ವಿರುದ್ಧ ಉಗ್ರ ಕ್ರಮ: ಕೃಷಿರಂಗದ ಸಂಪನ್ಮೂಲ ಶೇಖರಣೆ

ಪ್ರಜಾವಾಣಿ ವಿಶೇಷ
Published 18 ಜುಲೈ 2024, 22:28 IST
Last Updated 18 ಜುಲೈ 2024, 22:28 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಕಪ್ಪುಹಣದ ವಿರುದ್ಧ ಉಗ್ರಕ್ರಮ: ಕೃಷಿರಂಗದ ಸಂಪನ್ಮೂಲ ಶೇಖರಣೆ

ನವದೆಹಲಿ, ಜುಲೈ 18– ಪ್ರಸಕ್ತ ಆರ್ಥಿಕ ಬಿಕ್ಕಟ್ಟಿನಿಂದ ರಾಷ್ಟ್ರವನ್ನು ಪಾರು ಮಾಡಲು ಕಪ್ಪುಹಣದ ವಿರುದ್ಧ ಕ್ರಮ, ಕೃಷಿರಂಗದಿಂದ ಸಾಕಷ್ಟು ಸಂಪನ್ಮೂಲ ಶೇಖರಣೆ ಮತ್ತು ಅನಗತ್ಯವಾದ ವೆಚ್ಚ ಕಡಿತ– ಈ ಕ್ರಮಗಳನ್ನು ಕಾಂಗ್ರೆಸ್ಸಿಗರ ಸಮಾವೇಶವೊಂದು ಇಂದು ಸೂಚಿಸಿತು. 

ಹಣದುಬ್ಬರದ ಪರಿಸ್ಥಿತಿ ಎದುರಿಸಲು ಸಿನಿಕತನದಿಂದ ಕೂಡಿದ, ಸೋಲಿನ ಮನೋಭಾವದ ಧೋರಣೆ ತಳೆಯುವುದು ಸಮರ್ಥನೀಯವಲ್ಲ ಎಂದೂ ಸಿದ್ಧಾಂತವಾದಿಗಳು ಮತ್ತು ಸಕ್ರಿಯ ರಾಜಕಾರಣಿಗಳ ಎರಡು ದಿನಗಳ ಈ ರಾಷ್ಟ್ರೀಯ ಸಮಾವೇಶದಲ್ಲಿ ಘೋಷಿಸಲಾಯಿತು. 

ADVERTISEMENT

ಗಂಟೆಗೊಂದು ಕೊಲೆ,ಪಿಸ್ತೂಲು ಕೊಳ್ಳಲು ಕ್ಯೂ

ನ್ಯೂಯಾರ್ಕ್, ಜುಲೈ 18– ಗಂಟೆಗೆ ಒಬ್ಬ
ರಂತೆ, ಪಿಸ್ತೂಲಿನಿಂದ ಅಮೆರಿಕದಲ್ಲಿ ಕೊಲೆಗಳಾಗುತ್ತಿದ್ದು, 12 ಸೆಕೆಂಡಿಗೆ ಒಂದರಂತೆ ಪಿಸ್ತೂಲು ಮಾರಾಟವಾಗುತ್ತಿದೆ. 

ಏರುತ್ತಿದ್ದ ಅಪರಾಧಗಳ ಪರಿಸ್ಥಿತಿ ಹಾಗೂ ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರ ಕೊಳ್ಳಲು ನೂಕು
ನುಗ್ಗಲನ್ನು ವಾಷಿಂಗ್ಟನ್ ಪತ್ರಿಕೆಯೊಂದು ಮೇಲಿನ ಅಂಕಿಅಂಶವಿತ್ತು ವರದಿ ಮಾಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.