ADVERTISEMENT

50 ವರ್ಷಗಳ ಹಿಂದೆ: ಹರಿಯಾಣ ಡಿಐಜಿ ಕೊಲೆಗೆ ಹಿಂದಿ ಚಿತ್ರದ ಪ್ರೇರಣೆ

ಪ್ರಜಾವಾಣಿ ವಿಶೇಷ
Published 10 ಜೂನ್ 2024, 0:21 IST
Last Updated 10 ಜೂನ್ 2024, 0:21 IST
50 ವರ್ಷಗಳ ಹಿಂದೆ..
50 ವರ್ಷಗಳ ಹಿಂದೆ..   

ಹರಿಯಾಣ ಡಿಐಜಿ ಕೊಲೆಗೆ ಹಿಂದಿ ಚಿತ್ರದ ಪ್ರೇರಣೆ

ಚಂಡೀಗಢ, ಜೂನ್‌ 9– ಅಪರಾಧಾತ್ಮಕ ಚಿತ್ರಗಳು ಕೊಲೆ ನಡೆಸಲು ಅಪ್ರಬುದ್ಧ ಮನಸ್ಸುಗಳನ್ನು ಪ್ರೇರೇಪಿಸಬಹುದೇ?

ಜೂನ್‌ ನಾಲ್ಕರಂದು ತಮ್ಮ ನಿವಾಸದಲ್ಲಿ ಮರಣಕ್ಕೀಡಾದ ಹರಿಯಾಣ ಜೈಲುಗಳ ಡಿ.ಐ.ಜಿ. ಈಶ್ವರಸಿಂಗ್‌ ಕದನ್‌ ಅವರ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಈ ಪ್ರಶ್ನೆಯನ್ನು ವಿಶ್ಲೇಷಿಸಿದರೆ ಇದು ಸತ್ಯವೇನೋ ಅನ್ನಿಸದಿರದು.

ಅವರ ಮನೆ ಸೇವಕ, ಹತ್ತೊಂಬತ್ತು ವರ್ಷದ ಲೀಲಾರಾಮ್‌ ಕುಚ್‌ನನ್ನು ಪ್ರಶ್ನಿಸಿದಾಗ ಹೊರಬಂದ ಸಂಗತಿಗಳಲ್ಲಿ ಈ ಅಂಶ ಸಾಬೀತಾಗಿದೆ. ಅಪರಾಧವನ್ನು ತೋರುವ ಹಿಂದಿ ಚಿತ್ರವೊಂದರಿಂದತನಗೆ ಈ ಕೊಲೆಗೆ ಪ್ರೇರಣೆ ದೊರೆಯಿತೆಂದು ಆತ ಒಪ್ಪಿಕೊಂಡಿದ್ದಾನೆ.

ADVERTISEMENT

ಪರ್ವತಾರೋಹಿಗಳ ಕಣ್ಮರೆ:ತನಿಖಾ ಆಯೋಗ ನೇಮಕ

ನವದೆಹಲಿ, ಜೂನ್‌ 9– ಭಾರತ– ನ್ಯೂಜಿಲೆಂಡ್‌ ಮಹಿಳಾ ಪರ್ವತಾರೋಹಿಗಳ ತಂಡಕ್ಕೆ ಸೇರಿದ 4 ಮಂದಿ ಕಣ್ಮರೆಯಾಗಿರುವುದಕ್ಕೆ ಕಾರಣವಾದಂಥ ಸಂದರ್ಭಗಳ ಬಗ್ಗೆ ತನಿಖೆ ನಡೆಸಲು ಆಯೋಗವೊಂದನ್ನು ನೇಮಿಸಿರುವುದಾಗಿ ಭಾರತೀಯ ಪರ್ವತಾರೋಹಿ ಪ್ರತಿಷ್ಠಾನ ಇಂದು ಪ್ರಕಟಿಸಿದೆ.

ಈ ಪ್ರತಿಷ್ಠಾನದ ಮಾಜಿ ಅಧ್ಯಕ್ಷರೂ ಕೇಂದ್ರ ಸಚಿವ ಸಂಪುಟದ ಮಾಜಿ ಕಾರ್ಯದರ್ಶಿಯೂ ಆದ ಎಸ್‌.ಎಸ್‌. ಖೇರಾ ಅವರು ತನಿಖಾ ಆಯೋಗದ ಅಧ್ಯಕ್ಷರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.