ನವದೆಹಲಿ, ರೈಲ್ವೆಯಲ್ಲಿ ಭಾರಿ ಭ್ರಷ್ಟಾಚಾರ ತುಂಬಿದೆ ಹಾಗೂ ಅದಕ್ಷತೆ ಹೆಚ್ಚಿದೆ ಎಂದು ಇಂದು ರಾಜ್ಯಸಭೆಯಲ್ಲಿ ಆಪಾದಿಸಲಾಯಿತು.
ಕ್ಲಲಿದ್ದಲು ಸಾಗಣೆ ಪ್ರಶ್ನೆಗೆ ಉಪಮಂತ್ರಿ ಮಹಮದ್ ಷಫಿ ಕುರೇಷಿ ಅವರು ನೀಡಿದ ಉತ್ತರ ಕೆಲವು ಮಂದಿ ಸದಸ್ಯರಿಗೆ ಒಪ್ಪಿಗೆಯಾಗಲಿಲ್ಲ.
ಕಲ್ಲಿದ್ದಲು ಕೊರತೆ ಕಾರಣ ಪ್ರಯಾಣಿಕರ ರೈಲನ್ನು ರದ್ದುಪಡಿಸಲಾಗಿದೆ ಎಂಬ ಸದಸ್ಯರ ಪ್ರಶ್ನಗೆ ಅವರು ವ್ಯಾಗನ್‌ಗಳ ಕೊರತೆಯೇ ಕಲ್ಲಿದ್ದಲು ಕೊರತೆಗೆ ಕಾರಣವೆಂಬುದನ್ನು ನಿರಾಕರಿಸಿದರು.
ಬೆಂಗಳೂರು, ಕೆಳಮಟ್ಟದ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಏಪ್ರಿಲ್ 1ರಿಂದ ಇಲಾಖಾ ನೇಮಕಾತಿ ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಲಾಗಿದೆ ಎಂದು ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸು ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
ಶ್ರೀಗಳಾದ ಟಿ. ವಿ. ವೆಂಕಟಸ್ವಾಮಿ ಹಾಗೂ ಪಿ. ವೆಂಕಟರಮಣ ಅವರುಗಳ ಪ್ರಶ್ನೆಗಳಿಗೆ ಉತ್ತರ ನೀಡಿದ ಶ್ರೀ ಅರಸು ಅವರು, 59 ಇಲಾಖಾ ನೇಮಕಾತಿ ಸಮಿತಿಗಳನ್ನು ರಚಿಸಲಾಗಿದೆ ಎಂದೂ, ಇನ್ನು 3–4 ಇಲಾಖೆಗಳಿಗೆ ಸಮಿತಿಗಳನ್ನು ರಚಿಸಬೇಕಾಗಿದೆ ಎಂದೂ ನುಡಿದರು.
ಆ ಸಮಿತಿಗಳಲ್ಲಿ ಹರಿಜನ ಹಾಗೂ ಗಿರಿಜನರಿಗೆ ಪ್ರಾತಿನಿಧ್ಯ ನೀಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.