ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ: ಮಂಗಳವಾರ 23.03.1971

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 19:30 IST
Last Updated 22 ಮಾರ್ಚ್ 2021, 19:30 IST
   

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿತರಣೆ

ನವದೆಹಲಿ, ಮಾರ್ಚ್ 22– ಸಂಗೀತ, ನೃತ್ಯ ಮತ್ತು ನಾಟಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ 12 ಖ್ಯಾತ ಕಲಾವಿದರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳನ್ನು ರಾಷ್ಟ್ರಪತಿ ವಿ.ವಿ.ಗಿರಿಯವರು ಇಂದು ವಿತರಣೆ ಮಾಡಿದರು.

ಪ್ರಶಸ್ತಿ ಪಡೆದವರಲ್ಲಿ ಶ್ರೀ ದೊರೆಸ್ವಾಮಿ ಅಯ್ಯಂಗಾರ್ (ವೀಣೆ), ಶ್ರೀಮತಿ ಶಾಂತಾರಾವ್ (ಭರತನಾಟ್ಯ), ಶ್ರೀ ಕೆರೆಮನೆ ಶಿವರಾಂ ಹೆಗಡೆ (ಯಕ್ಷಗಾನ), ಶ್ರೀಮತಿ ವಸಂತ ಕುಮಾರಿ (ಕರ್ನಾಟಕ ಸಂಗೀತ) ಮತ್ತು ಶ್ರೀಮತಿ ಮೃಣಾಲಿನಿ ಸಾರಾಭಾಯಿ (ಪ್ರಯೋಗಶೀಲ ನೃತ್ಯ) ಇದ್ದಾರೆ.

ADVERTISEMENT

ಯೋಜನಾ ಆಯೋಗದ ಪುನರ್‌ರಚನೆ

ನವದೆಹಲಿ, ಮಾರ್ಚ್ 22– ರಾಷ್ಟ್ರದ ಯೋಜನೆಯ ಕಾರ್ಯಕ್ರಮಗಳ ಅನು ಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಲು ಸಾಧ್ಯವಾಗುವಂತೆ ಯೋಜನಾ ಆಯೋಗ ವನ್ನು ಪುನರ್‌ರಚಿಸಿ ಪುನರ್ ವ್ಯವಸ್ಥೆಗೊಳಿಸಲಾಗುತ್ತಿದೆ.

ಪುನರ್‌ರಚಿತ ಆಯೋಗದಲ್ಲಿ ಡಾ. ಡಿ.ಆರ್.ಗಾಡ್ಗೀಳರ ಸ್ಥಾನದಲ್ಲಿ ಬೇರೊಬ್ಬ ಉಪಾಧ್ಯಕ್ಷರು ಮತ್ತು ಕನಿಷ್ಠ ಇಬ್ಬರು ಹೊಸ ಸದಸ್ಯರು ಇರುವ ಸಂಭವವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.