ಗಡಿ ವಿವಾದ ಇತ್ಯರ್ಥ ಸೂಕ್ಷ್ಮ ಘಟ್ಟದಲ್ಲಿ
ಮುಂಬೈ, ಏ. 18– ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದವು ‘ಇತ್ಯರ್ಥವಾಗುವುದು ಸೂಕ್ಷ್ಮ ಘಟ್ಟದಲ್ಲಿದೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಎಸ್.ಬಿ. ಚವಾಣ್ ಇಲ್ಲಿ ಇಂದು ತಿಳಿಸಿದರು.
ಈ ವಿಷಯವನ್ನು ಅವರು ಬೆಳಗಾವಿಯಿಂದ ಬಂದಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಯ 150 ಸ್ವಯಂಸೇವಕರಿಗೆ ತಿಳಿಸುತ್ತಾ ಪರಿಹಾರ ಹಿಂದಕ್ಕೆ ಸರಿಯುವ ವಾತಾವರಣವನ್ನು ಸೃಷ್ಟಿಸಬಾರದೆಂದು ಜನತೆಗೆ ಮನವಿ ಮಾಡಿಕೊಂಡರು.
ದೇವಸ್ಥಾನ ಸಮಿತಿಗಳಲ್ಲಿ ಹರಿಜನ– ಗಿರಿಜನ ಪ್ರತಿನಿಧಿ
ಬೆಂಗಳೂರು, ಏ. 18– ಪ್ರತಿಯೊಂದು ದೇವಸ್ಥಾನ ಸಮಿತಿಗೆ ಹರಿಜನ ಇಲ್ಲವೆ ಗಿರಿಜನರ ಪ್ರತಿನಿಧಿ ನೇಮಕ.
–ಇದು ಸರ್ಕಾರದ ದೃಢನೀತಿ ಎಂದು ಕಂದಾಯ ಸಚಿವ ಎನ್.ಹುಚ್ಚಮಾಸ್ತಿ ಗೌಡರು ಇಂದು ವಿಧಾನಸಭೆಗೆ ತಿಳಿಸಿದರು.
ಮುಂಬೈ ಕರ್ನಾಟಕ, ಹಳೆಯ ಮದ್ರಾಸ್ ಹಾಗೂ ಮೈಸೂರು ಪ್ರದೇಶಗಳಲ್ಲಿ ಇರುವ ಶಾಸನಗಳು ಬೇರೆ ಬೇರೆ ಆಗಿವೆ. ಎಂದೂ ಅದರೂ ದೇವಸ್ಥಾನ ಸಮಿತಿಗೆ ಹರಿಜನ–ಗಿರಿಜನರ ಪ್ರತಿನಿಧಿ ನೇಮಿಸಲು ಸರ್ಕಾರದ ದೃಢ ನಿರ್ಧಾರ ಆಗಿದೆ ಎಂದು ಸಚಿವರು ಎಂ.ಎಚ್.ಜಯಪ್ರಕಾಶ್ ನಾರಾಯಣ ಅವರಿಗೆ ತಿಳಿಸಿದರು.
ಬೆಂಗಳೂರು ಜಿಲ್ಲೆಯ 11 ದೇವಸ್ಥಾನ ಬಿಟ್ಟು ಬಾಕಿ ಎಲ್ಲ ಮುಜರಾಯಿ ದೇವಸ್ಥಾನ ಧರ್ಮದರ್ಶಿಗಳ ಸಮಿತಿಗೆ ಹರಿಜನ– ಗಿರಿಜನರ ಪ್ರತಿನಿಧಿ ನೇಮಿಸಲಾಗಿದೆ ಎಂದು ಸಚಿವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.