ಬೆಂಗಳೂರು, ಜ. 31– ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳ ಚುನಾವಣೆಗಳನ್ನು ಪುನಃ ಮುಂದಕ್ಕೆ ಹಾಕಲಾಗಿದೆ.
ಈ ಬಗ್ಗೆ ರಾಜ್ಯಪಾಲರು ಹೊರಡಿಸಿದ ಸುಗ್ರೀವಾಜ್ಞೆ ಜನವರಿ 29ರಿಂದ ಜಾರಿಗೆ ಬಂದಿದೆ. ಈಗ ಇರುವ ಗ್ರಾಮ ಪಂಚಾಯಿತಿಗಳೇ ಪುನಃ ಚುನಾವಣೆಗಳು ನಡೆಯುವವರೆಗೆ ಮುಂದುವರೆಯುವುವು. ಆಡಳಿತಾಧಿಕಾರಿಗಳಿರುವ ಕಡೆಗಳಲ್ಲಿ ಅವರೇ ಮುಂದುವರಿಯುವರು.
ಈಗ ವಿಧಾನಸಭೆಯಾಗಲಿ ವಿಧಾನಪರಿಷ ತ್ತಾಗಲಿ ಅಧಿವೇಶನದಲ್ಲಿ ಇಲ್ಲದಿರುವುದರಿಂದ ಪರಿಸ್ಥಿತಿಯ ಜರೂರನ್ನು ಗಮನಿಸಿ ಸುಗ್ರೀವಾಜ್ಞೆ ಹೊರಡಿಸಬೇಕಾಗಿದೆಯೆಂದು ಸುಗ್ರೀವಾಜ್ಞೆ ಯಲ್ಲಿ ರಾಜ್ಯಪಾಲರು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.