ADVERTISEMENT

50 ವರ್ಷಗಳ ಹಿಂದೆ | ಪ್ರವಾಹ ಪೀಡಿತರಿಗೆ ತುರ್ತು ನೆರವು: ರೆಡ್‌ಕ್ರಾಸ್‌ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2024, 23:34 IST
Last Updated 8 ಆಗಸ್ಟ್ 2024, 23:34 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಸೆ.1ರಿಂದ ಹುಬ್ಬಳ್ಳಿ– ಧಾರವಾಡ ಗದಗ, ಬೆಳವಾಗಿ ನಗರಗಳಲ್ಲಿ ಅನೌಪಚಾರಿಕ ಪಡಿತರ ಜಾರಿಗೆ 

ಬೆಂಗಳೂರು, ಆ. 8– ಸೆಪ್ಟೆಂಬರ್‌ ಒಂದರಿಂದ, ಮೈಸೂರು, ಹುಬ್ಬಳ್ಳಿ– ಧಾರವಾಡ, ಗದಗ ಮತ್ತು ಬೆಳಗಾವಿ ಪಟ್ಟಣಗಳಲ್ಲಿ ಅನೌಪಚಾರಿಕ ಪಡಿತರ ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದೆ. 

ಇದಕ್ಕೆ ಸಂಬಂಧಿಸಿದೆ ಸಿದ್ಧತೆಗಳಲ್ಲ ಮುಗಿದಿದೆ ಎಂದು ಆಹಾರ ಮಂತ್ರಿ ಶ್ರೀ ಕೆ.ಎಚ್‌. ಪಟೇಲ್‌ ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.

ADVERTISEMENT

ಅವಕಾಶವಾದಂತೆಲ್ಲ 50,000ಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ಪಟ್ಟಣಗಳಿಗೆ ಪಡಿತರ ವಿಸ್ತರಿಸುತ್ತಾ ಹೋಗಬೇಕೆನ್ನುವುದು ಸರ್ಕಾರದ ನೀತಿಯಾಗಿದೆ. ಈಗಾಗಲೇ ಬೆಂಗಳೂರು, ಕೆ.ಜಿ.ಎಫ್‌ ಮತ್ತು ಮಂಗಳೂರುಗಳಲ್ಲಿ ಅನೌಪಚಾರಿಕ ಪಡಿತರ ಜಾರಿಯಲ್ಲಿದೆ.

ಪ್ರವಾಹ ಪೀಡಿತರಿಗೆ ತುರ್ತು ನೆರವು: ರಾಜ್ಯ ರೆಡ್‌ಕ್ರಾಸ್‌ ಪ್ರಯತ್ನ

ಬೆಂಗಳೂರು, ಆ. 8– ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆರೆಹಾವಳಿಯಿಂದ ನೊಂದವರಿಗೆ ನೀಡುವ ಸಲುವಾಗಿ ತುರ್ತಾಗಿ ಐದು ಸಾವಿರ ಕಂಳಿಗಳು, ಐದು ಟನ್‌ ಹಾಲಿನ ಪುಡಿ ಮತ್ತು ಒಂದು ಲಕ್ಷ ಅನ್ನಾಂಗ ಮಾತ್ರೆಗಳನ್ನು ರೆಡ್‌ಕ್ರಾಸ್‌ ಸೊಸೈಟಿಯ ಕರ್ನಾಟಕ ಶಾಖೆಯು ಆಗ್ರಹಪಡಿಸಿದೆ.

ನೆರೆಹಾವಳಿಗೆ ಸಿಕ್ಕಿದ ಪ್ರದೇಶಗಳಲ್ಲಿ ಪ್ರವಾಸ ಮಾಡಿ ಹಿಂದಿರುಗಿದ ಶಾಖೆಯ ಉಪಾಧ್ಯಕ್ಷ ಕ್ಯಾ. ಕೆ. ತಿಮ್ಮಪ್ಪಯ್ಯ ಅವರು 20,000ಕ್ಕೂ ಹೆಚ್ಚು ಕುಟುಂಬಗಳು ನಿರ್ವಸತಿಗೊಂಡಿವೆ ಎಂದು ಅಂದಾಜು ಮಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.