ADVERTISEMENT

50 ವರ್ಷಗಳ ಹಿಂದೆ | ಆಡಳಿತ ಪ್ರಭುಗಳಿಂದ ಹಸಿದ ಜನತೆಯ ಅಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2024, 23:30 IST
Last Updated 30 ಸೆಪ್ಟೆಂಬರ್ 2024, 23:30 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಆಡಳಿತ ಪ್ರಭುಗಳಿಂದ ಹಸಿದ ಜನತೆಯ ಅಲಕ್ಷ್ಯ

ನವದೆಹಲಿ, ಸೆ. 30– ಆಹಾರ ರಂಗದಲ್ಲಿ ತೀವ್ರಗೊಂಡಿರುವ ಬಿಕ್ಕಟ್ಟಿನಿಂದಲೂ ಸಹ ಕೇಂದ್ರವಾಗಲಿ, ರಾಜ್ಯ ಸರ್ಕಾರಗಳಾಗಲಿ ವಿಚಲಿತಗೊಂಡಂತೆ ಕಾಣುತ್ತಿಲ್ಲ. ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಅದರಲ್ಲೂ ವಿಶೇಷವಾಗಿ ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಗಳು ಒಳಜಗಳ ಮುಂತಾದವುಗಳಿಂದ ಇನ್ನೂ ಅಸ್ತವ್ಯಸ್ತ ಸ್ಥಿತಿಯಲ್ಲೇ ಇವೆ.

ಹಸಿವಿನಿಂದ ಜನ ಸತ್ತಿರುವ ಪ್ರಕರಣಗಳ ವರದಿ ಬರುತ್ತಿದ್ದರೂ ಆ ರಾಜ್ಯಗಳು ಬೃಹತ್‌ ಪರಿಹಾರ ಕ್ರಮ ಕೈಗೊಂಡಿರುವ ಅಥವಾ ಸಾರ್ವಜನಿಕ ಹಂಚಿಕೆ ವ್ಯವಸ್ಥೆ ತೀವ್ರಗೊಳಿಸಿ ರುವ ಸೂಚನೆಗಳೇ ಕಂಡುಬರುತ್ತಿಲ್ಲ.

ADVERTISEMENT

ಕಳ್ಳ ಸಾಗಣೆ ಚಟುವಟಿಕೆ ಪಶ್ಚಿಮದಿಂದ ಪೂರ್ವ ಕರಾವಳಿಗೆ ಸ್ಥಳಾಂತರ

ಮದ್ರಾಸ್, ಸೆ. 30– ರಾಷ್ಟ್ರದಲ್ಲಿ ಕಳ್ಳ ಸಾಗಣೆ ಚಟುವಟಿಕೆಗಳು ನಾನಾ ಕಾರಣಗಳಿಂದ ಪಶ್ಚಿಮ ಕರಾವಳಿಯಿಂದ ಪೂರ್ವ ಕರಾವಳಿಗೆ ಸ್ಥಳಾಂತರಗೊಳ್ಳಬಹುದು.

ಚಿನ್ನದ ಬೆಲೆ ಏರುತ್ತಿದ್ದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದರ ಪ್ರಮಾಣ ಕುಗ್ಗುತ್ತಿರುವುದರಿಂದ ಚಿನ್ನಕ್ಕಿಂತ ಜವಳಿಯಲ್ಲಿ  ಕಳ್ಳ ಸಾಗಣೆ ಹೆಚ್ಚಾಗುವ ನಿರೀಕ್ಷೆಯೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.