ADVERTISEMENT

50 ವರ್ಷಗಳ ಹಿಂದೆ: ಶನಿವಾರ, 28-10-1972

ಪ್ರಜಾವಾಣಿ ವಿಶೇಷ
Published 27 ಅಕ್ಟೋಬರ್ 2022, 21:30 IST
Last Updated 27 ಅಕ್ಟೋಬರ್ 2022, 21:30 IST
   

ಒಪ್ಪಂದದ ಹೊಸ್ತಿಲಲ್ಲಿದ್ದರೂವಿಯಟ್ನಾಮಿನಲ್ಲಿ ಉಗ್ರ ಕದನ

ಸೈಗಾನ್‌, ಅಕ್ಟೋಬರ್‌ 27– ಅಮೆರಿಕ ಮತ್ತು ಉತ್ತರ ವಿಯೆಟ್ನಾಂ ಮಧ್ಯೆ ಪ್ರಮುಖ ವಿಷಯಗಳಲ್ಲೆಲ್ಲ ಒಮ್ಮತ ಸಾಧನೆಯಾಗಿದ್ದು, ‘ಶಾಂತಿ ಸನಿಹದಲ್ಲಿದೆ’, ಪೂರ್ಣ ಒಪ್ಪಂದಕ್ಕೆ 3–4 ದಿನಗಳ ಇನ್ನೊಂದು ಸುತ್ತಿನ ಸಂಧಾನ ಸಾಕು ಎಂದು ಅಧ್ಯಕ್ಷ ನಿಕ್ಸನ್‌ ಪ್ರತಿನಿಧಿ ಹೆನ್ರಿ ಕೆಸಿಂಜರ್‌ ನುಡಿದಿದ್ದರೂ, ವಿಯೆಟ್ನಾಂ ಕದನ ಇಂದು ಇನ್ನಷ್ಟು ತೀವ್ರಗೊಂಡಂತಿತ್ತು.

ಕದನ ವಿರಾಮಕ್ಕೆ ಮುನ್ನ, ಸಾಧ್ಯವಾದಷ್ಟು ಹೆಚ್ಚು ಪ್ರ‌ದೇಶ ವಶಪಡಿಸಿಕೊಂಡು ಅಂತಿಮ ರಾಜಕೀಯ ಚೌಕಾಸಿಯಲ್ಲಿ ಮೇಲುಗೈ ಪಡೆಯಬೇಕೆಂಬ ಆಕಾಂಕ್ಷೆ ಎರಡು ಪಕ್ಷಗಳಲ್ಲಿಯೂ ಉಂಟಾಗಿತ್ತು.

ADVERTISEMENT

ಕೇಂದ್ರ ನೆರವಿನಿಂದ ಕಾರವಾರ ಬಳಿ ಸಣ್ಣ ನೌಕಾ ನಿರ್ಮಾಣ ಕಟ್ಟೆ

ನವದೆಹಲಿ, ಅಕ್ಟೋಬರ್‌ 27– ಕಾರವಾರದ ಬಳಿ ಸಾವಿರ ಟನ್‌ ಸಾಮರ್ಥ್ಯದ ಸಣ್ಣ ನೌಕೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಇಷ್ಟರಲ್ಲಿಯೇ ಯೋಜನೆಯೊಂದನ್ನು ಸಿದ್ಧ ಪಡಿಸಲಿದೆ. ಈ ಸಂಬಂಧ ರಾಜ್ಯಕ್ಕೆ ಎಲ್ಲ ಸಾಧ್ಯ ಸಹಾಯವನ್ನು ನೀಡಲು ಕೇಂದ್ರ ಒಪ್ಪಿದೆ.

ರಾಜ್ಯ ಕೈಗಾರಿಕಾ ಸಚಿವ ಎಸ್‌.ಎಂ. ಕೃಷ್ಣ ಅವರು ಕೇಂದ್ರದ ಹಡಗು ಸಾರಿಗೆ ಸಚಿವ ರಾಜಬಹಾದೂರ್‌ ಜೊತೆ ಇಂದು ಮಾತುಕತೆ ನಡೆಸಿ ಕಾರವಾರ ಮತ್ತು ಮಂಗಳೂರು ಬಳಿ ನೌಕಾ ನಿರ್ಮಾಣ ಕಟ್ಟೆಗಳ ಅಗತ್ಯದ ಬಗ್ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.