
ಪ್ರಜಾವಾಣಿ ವಾರ್ತೆ
ಮಲೆಯಾಳಿ ಭಾಷೆ ಕಲಿಯದವರಿಗೆ ಸರ್ಕಾರಿ ನೌಕರಿ ಇಲ್ಲ
ಕಾಸರಗೋಡು, ಜ.18– ಇನ್ನು ಮುಂದೆ ಕೇರಳ ರಾಜ್ಯದಲ್ಲಿ ಮಲೆಯಾಳಿ ಭಾಷೆ ಬಾರದವರಿಗೆ ಸರ್ಕಾರಿ ಉದ್ಯೋಗವಿಲ್ಲ. ಹಾಲಿ ಉದ್ಯೋಗದಲ್ಲಿರುವ ಹಾಗೂ ಮುಂಬಡ್ತಿ ಪಡೆದಿರುವ ಕೇರಳೀಯ ರಲ್ಲದವರು ನಾಲ್ಕು ವರ್ಷಗಳ ಅವಧಿಯೊಳಗೆ ಮಲೆಯಾಳಿ ಭಾಷೆ ಪರೀಕ್ಷೆಯಲ್ಲಿ ತೇರ್ಗಡೆಯಾಗದಿದ್ದರೆ ಉದ್ಯೋಗ ಕಳೆದುಕೊಳ್ಳುವರು ಇಲ್ಲವೇ ಹಿಂಬಡ್ತಿ ಪಡೆಯುವರು.
ಕೇರಳ ಸರ್ಕಾರ ಹೊರಡಿಸಿದ ಈ ಆಜ್ಞೆಯಿಂದ ಕಾಸರಗೋಡಿನಲ್ಲಿರುವ ಸರ್ಕಾರಿ ಉದ್ಯೋಗಸ್ಥ ಕನ್ನಡಿಗರು ಅಸಮಾಧಾನಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.