ADVERTISEMENT

50 ವರ್ಷಗಳ ಹಿಂದೆ | ಅರಸು ಅವರಿಗೆ ಪ್ರಚಂಡ ಜಯ

ಪ್ರಜಾವಾಣಿ ವಿಶೇಷ
Published 13 ಜೂನ್ 2022, 20:05 IST
Last Updated 13 ಜೂನ್ 2022, 20:05 IST
   

ಅರಸು ಅವರಿಗೆ ಪ್ರಚಂಡ ಜಯ

ಮೈಸೂರು, ಜೂನ್‌ 13– ಹುಣಸೂರು ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸು ಅವರು ಪ್ರಚಂಡ ಬಹುಮತದಿಂದ ಜಯ ಗಳಿಸಿದ್ದಾರೆ.

ಶ್ರೀ ಅರಸು ಅವರು ತಮ್ಮ ಸಮೀಪ ಪ್ರತಿಸ್ಪರ್ಧಿಗಳಿಗಿಂತ 35 ಸಾವಿರಕ್ಕೂ ಹೆಚ್ಚು ಮತ ಗಳಿಸಿ ಚುನಾಯಿತರಾಗಿದ್ದಾರೆ.

ಸೋತ ನಾಲ್ವರು ಪಕ್ಷೇತರ ಅಭ್ಯರ್ಥಿಗಳೂ ತಮ್ಮ ಕಳೆದುಕೊಂಡಿದ್ದಾರೆ.

ADVERTISEMENT

ಕಾವೇರಿ ಜಲವಿವಾದ: ಅಂಕಿಅಂಶ ಸಂಗ್ರಹಕ್ಕೆ ನಾಲ್ವರ ಸಮಿತಿ ನೇಮಕ

ನವದೆಹಲಿ, ಜೂನ್‌ 13– ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದ ವಿವಾದ ಇತ್ಯರ್ಥ ಪ್ರಯತ್ನದ ಅಂಗವಾಗಿ ಇಂದು ಕೇಂದ್ರ ಸರ್ಕಾರವು ನಾಲ್ಕು ಸದಸ್ಯರಿರುವ ಅಂಕಿಅಂಶ ಸಂಗ್ರಹ ಸಮಿತಿಯೊಂದನ್ನು ನೇಮಕ ಮಾಡಿತು.

ಸಮಿತಿಯ ಸದಸ್ಯರು: ಸಿಂಧೂನದಿ ನಿವೃತ್ತ ಕಮಿಷನರ್‌ ಹಾಗೂ ಕೇಂದ್ರ ನೀರಾವರಿ ಮತ್ತು ವಿದ್ಯುತ್‌ ಖಾತೆಯ ಜಂಟೀಕಾರ್ಯದರ್ಶಿ ಆರ್‌.ಅಹೂಜ ಪಂಜಾಬಿನ ನಿವೃತ್ತ ಚೀಫ್‌ ಇಂಜಿನಿಯರ್‌ ಜತೀಂದ್ರ ಸಿಂಗ್‌ ಕೇಂದ್ರ ಸರ್ಕಾರದ ನಿವೃತ್ತ ಕೃಷಿ ಕಮಿಷನರ್‌ ಡಾ. ಜೆ.ಎಸ್‌. ಪಟೇಲ್‌, ಇನ್ನೊಬ್ಬ ಸದಸ್ಯರನ್ನು (ನಿವೃತ್ತ ನ್ಯಾಯಾಧೀಶರು) ಸದ್ಯದಲ್ಲೇ ನೇಮಕ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.