ADVERTISEMENT

50 ವರ್ಷಗಳ ಹಿಂದೆ| ಭಾನುವಾರ,17–05–1970

​ಪ್ರಜಾವಾಣಿ ವಾರ್ತೆ
Published 16 ಮೇ 2020, 15:14 IST
Last Updated 16 ಮೇ 2020, 15:14 IST

ಮದ್ರಾಸ್‌, ಮೇ 16: ಕಾವೇರಿ ನದಿ ನೀರು ಹಂಚಿಕೆಯಲ್ಲಿ ತಮಿಳುನಾಡು, ಮೈಸೂರು ಮತ್ತು ಕೇರಳ ರಾಜ್ಯಗಳ ಮಧ್ಯೆ ತಲೆಹಾಕಿರುವ ವಿವಾದವು ಪರಿಹಾರದ ಹೊಸ್ತಿಲಿಗೆ ತಲುಪಿದ್ದು, ಮುಂದಿನ ಮೂರು ತಿಂಗಳಲ್ಲಿ ಅಂತಿಮ ಒಪ್ಪಂದ ಕಾಣುವ ಸಾಧ್ಯತೆ ಇದೆ.

ಅಂತಿಮ ಒಪ್ಪಂದ ಮಾಡಿಕೊಳ್ಳಲು ಸಹಾಯವಾಗುವಂತೆ ಆಯಾ ರಾಜ್ಯಗಳಿಗೆ ಸೇರಿದ ಎಂಜಿನಿಯರುಗಳು ಅಗತ್ಯವಿರುವ ಅಂಕಿ–ಅಂಶಗಳನ್ನು ಮೂರು ತಿಂಗಳೊಳಗಾಗಿ ಸಂಗ್ರಹಿಸುವ ಸಲಹೆಗೆ ಮೂರೂ ರಾಜ್ಯಗಳ ಮುಖ್ಯಮಂತ್ರಿಗಳು ಇಂದು ಇಲ್ಲಿ ಸಮ್ಮತಿ ಇತ್ತರು.

ಚರ್ಚೆ ಸೌಹಾರ್ದ ವಾತಾವರಣದಲ್ಲಿ ನಡೆದು ಬಿಕ್ಕಟ್ಟು ಸಾಕಷ್ಟು ಸಡಿಲಗೊಂಡಿರುವುದಾಗಿ ಏಳು ಗಂಟೆಗಳ ಮಾತುಕತೆ ನಂತರ ಕೇಂದ್ರ ನೀರಾವರಿ ಮತ್ತು ವಿದ್ಯುಚ್ಛಕ್ತಿ ಸಚಿವ ಕೆ.ಎಲ್‌.ರಾವ್‌ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.