ADVERTISEMENT

50 ವರ್ಷಗಳ ಹಿಂದೆ | ಸೋಮವಾರ, 1–6–1970

​ಪ್ರಜಾವಾಣಿ ವಾರ್ತೆ
Published 31 ಮೇ 2020, 20:00 IST
Last Updated 31 ಮೇ 2020, 20:00 IST

ಗಜಗರ್ಭದ ಪ್ರಥಮ ಶಸ್ತ್ರಚಿಕಿತ್ಸೆ
ಮೈಸೂರು, ಮೇ 31– ಬದಲಿ ಹೃದಯದ ಶಸ್ತ್ರಚಿಕಿತ್ಸೆಯಷ್ಟೇ ಮಹತ್ವದ್ದೆನ್ನಬಹುದಾದ ವೈದ್ಯಕೀಯ ಸಾಧನೆ ಇಂದು ಸಂಜೆ ಮೈಸೂರು ಮೃಗಾಲಯದಲ್ಲಿ ದಾಖಲೆ ಆಯಿತು. ಸಂದರ್ಭ– ಸತ್ತ ಆನೆ ಮರಿ ಅಥವಾ ಭ್ರೂಣವನ್ನು ತಾಯಿ ಆನೆ ಗರ್ಭಕೋಶದಿಂದ ಹೊರತೆಗೆಯಲು ಅವಿರತವಾಗಿ ಏಳು ಗಂಟೆ ಕಾಲ ನಡೆಸಿದ ಶಸ್ತ್ರಚಿಕಿತ್ಸೆ. ಆನೆಗಳ ಪ್ರಪಂಚದಲ್ಲಿ ಪ್ರಾಯಶಃ ಇದೇ ಇಂತಹ ಪ್ರಥಮ ಪ್ರಯೋಗ.

ಶಸ್ತ್ರಚಿಕಿತ್ಸೆ ನಂತರ 50 ವರ್ಷ ವಯಸ್ಸಿನ ತಾಯಿ ಆನೆ ‘ಪದ್ಮಾವತಿ’ ಆರೋಗ್ಯವಾಗಿದೆಯೆಂದು ವರದಿಯಾಗಿದೆ.

ಪಶ್ಚಾತ್ತಾಪಪಟ್ಟವರನ್ನು ಮತ್ತೆ ಸೇರಿಸಿಕೊಳ್ಳಲು ವಿರೋಧಿ ಕಾಂಗ್ರೆಸ್‌ ಸಿದ್ಧ
ಮಂಡ್ಯ, ಮೇ 31– ಯಾವುದೇ ಕಾರಣಕ್ಕಾಗಿ ಕಾಂಗ್ರೆಸ್‌ ಸಂಸ್ಥೆಯನ್ನು ಬಿಟ್ಟು ಪ್ರಧಾನಿ ಪಕ್ಷವನ್ನು ಸೇರಿ ಈಗ
ಪಶ್ಚಾತ್ತಾಪಪಟ್ಟುಕೊಳ್ಳುವವರಿದ್ದರೆ ಅಂಥವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ವಿರೋಧಿ ಕಾಂಗ್ರೆಸ್‌ನ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರು ಸಿದ್ಧರಿದ್ದಾರೆ.

ADVERTISEMENT

‘ಅಂಥವರಿಗೆ ಸ್ವಾಗತ ನೀಡುತ್ತಿದ್ದೇನೆ. ರಾಷ್ಟ್ರದ ಹಿತದೃಷ್ಟಿಯಿಂದ ಈ ಕರೆ ಕೊಡುತ್ತಿದ್ದೇನೆ’ ಎಂದು ಡಾ. ನಾಗಪ್ಪ ಆಳ್ವಾ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.