ADVERTISEMENT

50 ವರ್ಷಗಳ ಹಿಂದೆ | ಶನಿವಾರ, ಜೂನ್ 27 1970

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 15:32 IST
Last Updated 26 ಜೂನ್ 2020, 15:32 IST

ಕೇರಳ ವಿಧಾನಸಭೆ ವಿಸರ್ಜನೆ: ಹೊಸ ಚುನಾವಣೆಗೆ ಆಜ್ಞೆ

ತಿರುವನಂತಪುರ, ಜೂನ್‌ 26– ಕೇರಳದ ರಾಜ್ಯಪಾಲ ಶ್ರೀ ವಿ.ವಿಶ್ವನಾಥನ್‌ ಅವರು ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಿ ಹೊಸ ಚುನಾವಣೆಗಳಿಗೆ ಆಜ್ಞೆ ಮಾಡಿದ್ದಾರೆ.

ಮುಖ್ಯಮಂತ್ರಿ ಅಚ್ಯುತ ಮೆನನ್‌ ಅವರ ಸಲಹೆಯ ಅನುಸಾರ ರಾಜ್ಯಪಾಲರು ಈ ಕ್ರಮ ಕೈಗೊಂಡಿದ್ದಾರೆ. ಮುಖ್ಯಮಂತ್ರಿಯವರು ರಾಜ್ಯಪಾಲರಿಗೆ ಈ ಸಲಹೆ ಮಾಡಿದ್ದು ಅವರ ಸಂಪುಟದ ಅನೇಕ ಸಹೋದ್ಯೋಗಿಗಳಿಗೇ ಗೊತ್ತಿರಲಿಲ್ಲವೆಂದೂ ವಿಧಾನಸಭೆ ವಿಸರ್ಜನೆ ಸುದ್ದಿ ಅವರಿಗೆ ಆಶ್ಚರ್ಯವನ್ನುಂಟು ಮಾಡಿತೆಂದೂ ಐ.ಎಸ್‌.ಪಿ. ಅಧ್ಯಕ್ಷ ಶ್ರೀ ಚಂದ್ರಶೇಖರನ್‌ ಅವರು ತಿಳಿಸಿದ್ದಾರೆ.

ADVERTISEMENT

ಎಚ್‌.ಎಂ.ಟಿ ಲಾಭ ಗಳಿಕೆಯತ್ತ

ಬೆಂಗಳೂರು, ಜೂನ್‌ 26– ಐದು ವರ್ಷಗಳ ಅವಧಿಯಲ್ಲಿ 20 ಕೋಟಿ ರೂಪಾಯಿ ಹೆಚ್ಚು ಬಂಡವಾಳ ಹೂಡಿಕೆಯೊಡನೆ ತಯಾರಿಕೆ ಕ್ಷೇತ್ರಗಳನ್ನು ವಿಸ್ತರಿಸಿ ಸತತವಾಗಿ ಲಾಭ ಗಳಿಸುವ ಸಿದ್ಧತೆಯನ್ನು ಎಚ್‌.ಎಂ.ಟಿ ಮಾಡಿಕೊಳ್ಳುತ್ತಿದೆ.

20 ಕೋಟಿ ರೂಪಾಯಿ ಹೆಚ್ಚು ಬಂಡವಾಳ ಹೂಡಿದಾಗ ಎಚ್‌.ಎಂ.ಟಿಯ ಒಟ್ಟು ಬಂಡವಾಳ 50 ಕೋಟಿ ರೂಪಾಯಿಗೆ ಏರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.