ADVERTISEMENT

50 ವರ್ಷಗ:ಳ ಹಿಂದೆ: ಗಂಧ, ಮರಗಳ ಕಳ್ಳಸಾಗಾಣಿಕೆಯ ವಿರುದ್ಧ ಬಿಗಿ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 19:31 IST
Last Updated 12 ಜುಲೈ 2022, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಗಂಧ, ಮರಮುಟ್ಟುಗಳ ಕಳ್ಳಸಾಗಾಣಿಕೆಯ ವಿರುದ್ಧ ಬಿಗಿ ಕ್ರಮಕ್ಕೆ ಆಗ್ರಹ

ಬೆಂಗಳೂರು, ಜುಲೈ 12– ಅರಣ್ಯಗಳಿಂದ ಗಂಧ ಮುಂತಾದ ಬೆಲೆಬಾಳುವ ಮರಗಳ ಕಳ್ಳ ಸಾಗಾಣಿಕೆ ನಡೆಯುತ್ತಿರುವುದನ್ನು ತಡೆಗಟ್ಟಲು ಬಿಗುವಾದ ಕ್ರಮ ಕೈಗೊಳ್ಳಬೇಕಂದು ವಿಧಾನಸಭೆಯಲ್ಲಿ ಇಂದು ಸದಸ್ಯರು ಒತ್ತಾಯ ಪಡಿಸಿದರು.

ಕೃಷಿ, ಅರಣ್ಯ, ಪಶುಸಂಗೋಪನೆ ಇಲಾಖೆಗಳಿಗೆ ಸಂಬಂಧಿಸಿದ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಸದಸ್ಯರಲ್ಲಿ ಅನೇಕ ಮಂದಿ, ಮರಗಳ ಕಳ್ಳ ಸಾಗಾಣಿಕೆ ಭಾರಿ ಪ್ರಮಾಣದಲ್ಲಿ ನಡಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ADVERTISEMENT

ಖಾಸಗಿ ನರ್ಸಿಂಗ್‌ ಹೋಂ ವಿಧೇಯಕ

ಬೆಂಗಳೂರು ಜುಲೈ 12– ಖಾಸಗಿ ನರ್ಸಿಂಗ್‌ ಹೋಂಗಳನ್ನು ಕೆಲ ನಿಯಮಗಳಿಗೆ ಒಳಪಡಿಸುವ ವಿಧೇಯಕವನ್ನು ಸರ್ಕಾರ ಸಿದ್ಧ ಮಾಡಿದೆ.

ಆರೋಗ್ಯ ಇಲಾಖೆಯ ಬೇಡಿಕೆಗಳ ಮೇಲೆ ನಡೆದ ಚರ್ಚೆಗೆ ಇಂದು ವಿಧಾನಸಭೆಯಲ್ಲಿ ಉತ್ತರ ನೀಡಿದ ಆರೋಗ್ಯ ಸಚಿವ ಶ್ರೀ ಎಚ್‌. ಸಿದ್ದವೀರಪ್ಪ ಅವರು ಖಾಸಗಿ ನರ್ಸಿಂಗ್‌ ಹೋಂಗಳನ್ನು ಕೆಲ ಹತೋಟಿಗೆ ಒಳಪಡಿಸುವುದು ಸೂಕ್ತವೆಂದು ಅಭಿಪ‍್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.