ನಗರದಲ್ಲಿ ರೇಷನ್ ವೈಖರಿ
ಬೆಂಗಳೂರು, ಜೂನ್ 10– ಆಹಾರ ಪದ್ಧತಿಯನ್ನು ಬದಲಾಯಿಸಿ ಮಿಶ್ರ ಆಹಾರ ಪದ್ಧತಿ ಜಾರಿಗೆ ತರಬೇಕೆಂಬ ವಾದವನ್ನು ಆಹಾರ ಸರಬರಾಜು ಇಲಾಖೆಯು ಗ್ರಾಹಕರ ಮೇಲೆ ಕಡ್ಡಾಯವಾಗಿ ಹೇರಲು ಪಣ ತೊಟ್ಟಂತಿದೆ.
ನೀಡುವ ಗೋಧಿ ಹಿಟ್ಟಿನಲ್ಲಿ ಹುಳುಗಳಿದ್ದು, ಸಸ್ಯಾಹಾರಿಗಳನ್ನು ಮಾಂಸಹಾರಿಗಳನ್ನಾಗಿ ಪರಿವರ್ತಿಸುವ ಧೋರಣೆ ಒಂದು ಕಡೆಯಾದರೆ, ಕಸ– ಕಡ್ಡಿ, ಹುಳು ಹುಪ್ಪಟೆ ಸಮೇತವಾಗಿ ಸಕಲ ಧಾನ್ಯಮಿಶ್ರಿತ ಗೋಧಿಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ನೀಡಲಾಗುತ್ತಿದೆ ಎಂಬ ದೂರುಗಳು ಬಂದಿವೆ.
ಗೋಧಿಹಿಟ್ಟು ದನಗಳ ಮೇವಿಗೂ ಯೋಗ್ಯವಿಲ್ಲ ಎಂದು ಶಾಸಕ ಪಿ.ಎಸ್. ಕೃಷ್ಣಯ್ಯರ್ ದೂರಿದರೆ, ‘ನೀವೇ ನೋಡಿ’ ಎಂದು ಗ್ರಾಹಕರಲ್ಲೊಬ್ಬರು ತಾವು ನ್ಯಾಯಬೆಲೆ ಅಂಗಡಿಯಿಂದ ತಂದ ಗೋಧಿಚೀಲವನ್ನು ‘ಪ್ರಜಾವಾಣಿ’ ಪತ್ರಿಕಾಲಯಕ್ಕೆ ಒಪ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.