ADVERTISEMENT

50 ವರ್ಷದ ಹಿಂದೆ: ಹೆಸರು ಸಾಗರ– ನೀರಿಗೆ ಬರ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 0:15 IST
Last Updated 12 ಜೂನ್ 2025, 0:15 IST
 50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಹೆಸರು ಸಾಗರ– ನೀರಿಗೆ ಬರ

ಚಿತ್ರದುರ್ಗ, ಜೂನ್ 11– ಈಚೀಚೆಗೆ ಅದೊಂದು ‘ಮರೀಚಿಕೆ’ ಆಗಿದೆ. ನೀರಿಗಾಗಿ ನಿರ್ಮಾಣವಾದ ಕಟ್ಟೆ. ಮುಕ್ಕಾಲು ಶತಮಾನದ ಹಿಂದೆ ಹಂಚಿಕೊಳ್ಳುವವರ ಸಂಖ್ಯೆ ಕಡಿಮೆ ಇತ್ತು. ನೀರು ಸಾಕಾಗಿತ್ತು. ಬೆಳೆವ ಬಯಲು ಬೆಳೆಯಿತು, ಬಂಜರಾಯಿತು.

ಜಿಲ್ಲೆಯ ವಾಣಿವಿಲಾಸ ಸಾಗರ ಸುಮಾರು ಮೂರು ದಶಕಗಳಿಂದ ಇದ್ದೂ ಇಲ್ಲದಂತಾಗಿದೆ. ಕಟ್ಟೆ ಇದೆ, ಸಾಕಷ್ಟು ನೀರಿಲ್ಲ. ಈಗ ನೀರನ್ನೂ ತುಂಬುವ ಪ್ರಯತ್ನ. ಹಿರಿಯೂರು ತಾಲ್ಲೂಕಿನ ರೈತರಲ್ಲಿ ಮತ್ತೆ ಆಶಾಭಾವನೆಯನ್ನು ಮೂಡಿಸಿದೆ.

ADVERTISEMENT

ತೈಲ ರಾಷ್ಟ್ರಗಳಿಗೆ ರಾಜ್ಯದಿಂದ ಮಾಂಸ ರಫ್ತಿಗೆ ಯೋಜನೆ

ಬೆಂಗಳೂರು, ಜೂನ್ 11– ರಾಜ್ಯದಿಂದ ಪರ್ಷಿಯನ್‌ ಖಾರಿ ರಾಷ್ಟ್ರಗಳಿಗೆ ಮಾಂಸ ರಫ್ತು ಮಾಡಲು ಪರಿಶೀಲಿಸಲಾಗುತ್ತಿದೆ.

ರಾಜ್ಯದಲ್ಲಿ ಆ ಬಗ್ಗೆ ಪರಿಶೀಲಿಸಲು ಇತ್ತೀಚೆಗೆ ಪ್ರವಾಸ ಮಾಡಿದ ವಿಶ್ವಸಂಸ್ಥೆ ತಜ್ಞರ ತಂಡವೊಂದು ಯೋಜನಾ ವರದಿಯೊಂದನ್ನು ಸಿದ್ಧಪಡಿಸಲಿದೆ ಎಂದು ಕೃಷಿ ಸಚಿವ ಎನ್‌. ಚಿಕ್ಕೇಗೌಡ ಅವರು ಮಂಗಳವಾರ ಇಲ್ಲಿ ತಿಳಿಸಿದರು.

ಬಂಡೂರು ಜಾತಿ ಕುರಿ ಮಾಂಸಕ್ಕೆ ಹೆಚ್ಚು ಬೇಡಿಕೆ ಇದೆಯೆಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.