ಹಿಂದೂಸಾಗರ ಸುರಕ್ಷತೆ: ಭಾರತದ ಷರತ್ತು
ಸಿಂಗಪುರ, ಜ. 21– ಹಿಂದೂ ಮಹಾಸಾಗರದ ವ್ಯಾಪಾರ ಮಾರ್ಗಗಳ ಸುರಕ್ಷತೆ ಬಗ್ಗೆ ಎಂಟು ರಾಷ್ಟ್ರಗಳ ಅಧ್ಯಯನ ತಂಡವು ತನ್ನ ವರದಿ ಸಲ್ಲಿಸುವ ಮುನ್ನವೇ ದಕ್ಷಿಣ ಆಫ್ರಿಕಾಕ್ಕೆ ಶಸ್ತ್ರಾಸ್ತ್ರ ಮಾರಾಟ ಮಾಡುವ ನಿರ್ಧಾರವನ್ನು ಬ್ರಿಟನ್ ಪ್ರಕಟಿಸಿದ್ದಾದರೆ ಆ ಅಧ್ಯಯನ ತಂಡದಿಂದ ಭಾರತ ಹೊರಬೀಳುವುದು ಎಂದು ಭಾರತದ ವಿದೇಶಾಂಗ ಮಂತ್ರಿ ಶ್ರೀ ಸ್ವರಣ್‌ಸಿಂಗ್ ಅವರು ಇಂದು ಇಲ್ಲಿ ಸೂಚಿಸಿದರು.
ದಕ್ಷಿಣ ಆಫ್ರಿಕಾಕ್ಕೆ ಬ್ರಿಟನ್ ಶಸ್ತ್ರಾಸ್ತ್ರ ಮಾರಾಟ ಮಾಡುವ ವಿಷಯವನ್ನು ಹಾಗೂ ಅದರಿಂದ ಕಾಮನ್ವೆಲ್ತ್ ಮೇಲೆ ಉಂಟಾಗುವ ಪರಿಣಾಮವನ್ನು ಈ ಅಧ್ಯಯನ ತಂಡ ಪರಿಶೀಲಿಸುವುದೆಂದು ಭಾರತ ಭಾವಿಸಿರುವುದಾಗಿಯೂ ಅವರು ಹೇಳಿದರು.
ಅಡಿಕೆ ಅಸ್ತಿತ್ವ: ಕಂಗಾಲಾದ ರೈತರ ಸಾವು–ಬದುಕಿನ ಪ್ರಶ್ನೆ
ಬೆಂಗಳೂರು, ಜ. 21– ಫಸಲಿನ ಆಸೆಯಂತೂ ಇಲ್ಲವೇ ಇಲ್ಲ. ಗಿಡಗಳನ್ನು ಉಳಿಸಿಕೊಳ್ಳುವುದೇ ದುಸ್ಸಾಹಸದ ಮಾತು.
ಕಳೆದ ನವೆಂಬರ್ ಅಂತ್ಯ ಮತ್ತು ಡಿಸೆಂಬರ್ ಆದಿಭಾಗದಲ್ಲಿ ಬೀಸಿದ ಶೀತಲ ಮಾರುತ, ಮಲೆನಾಡಿನ ಸಂಪತ್ತಾದ ಅಡಿಕೆ ಬೆಳೆಗೆ ಮಾರಕವಾಗಿದೆ. ಸುಮಾರು ಒಂದು ನೂರು ಕೋಟಿ ರೂ.ಗಳಿಗಿಂತ ಹೆಚ್ಚು ಬೆಲೆಯ ಅಡಿಕೆ ತೋಟಗಳ ಸಾವು ಬದುಕಿನ ಭೀಕರ ಸಮಸ್ಯೆ ರಾಜ್ಯವನ್ನು ಕಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.