ಸಾಂದ್ರ ಪರಿಹಾರ ಕ್ರಮ: ಕಂದಾಯ ತಕಾವಿ ಸಾಲ ವಸೂಲಿ ತಡೆಗೆ ಆದೇಶ
ಬೆಂಗಳೂರು, ಆ. 2– ಮಳೆಯಿಲ್ಲದ ಅಭಾವ ಕಾಲಿಟ್ಟಿರುವ ರಾಜ್ಯದ 42 ತಾಲ್ಲೂಕುಗಳಲ್ಲಿ ತಕ್ಷಣ ಸಾಂದ್ರ ಪರಿಹಾರ ಕಾಮಗಾರಿಗಳ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಈ ತಾಲ್ಲೂಕುಗಳು ಮತ್ತು ಇತರ ಕೆಲವು ಭಾಗಶಃ ಸಂಕಷ್ಟಪೀಡಿತ ತಾಲ್ಲೂಕುಗಳಲ್ಲಿ ಭೂಕಂದಾಯ ಹಾಗೂ ತಕಾವಿ ಸಾಲದ ವಸೂಲಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ರಾಜ್ಯಪಾಲ ಧರ್ಮವೀರ ಅವರು ಆದೇಶ ನೀಡಿದ್ದಾರೆ.
ನಲವತ್ತೆರಡು ತಾಲ್ಲೂಕುಗಳಲ್ಲಿ ಪರಿಹಾರ ಕಾಮಗಾರಿಗಳನ್ನು ಆರಂಭಿಸಲು 4.80 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ. ಇಲ್ಲಿ ಈಗಾಗಲೇ
ಮುಂದುವರಿಯುತ್ತಿರುವ ಭೂ ಸಾರ ರಕ್ಷಣೆ, ಬಾವಿ ತೋಡುವಿಕೆಯಂಥ ಕಾಮಗಾರಿಗಳನ್ನು ತ್ವರಿತಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.