
ಪ್ರಜಾವಾಣಿ ವಾರ್ತೆ
ಬನ್ನೇರುಘಟ್ಟದಲ್ಲಿ ರಾಷ್ಟ್ರೀಯ ಅರಣ್ಯೋದ್ಯಾನ ಅಭಿವೃದ್ಧಿ ಯೋಜನೆಯ ಉದ್ಘಾಟನೆ
ಬೆಂಗಳೂರು, ಆ. 8– ಇಲ್ಲಿಂದ ಹದಿನೈದು ಮೈಲಿಗಳ ದೂರವಿರುವ ಪ್ರವಾಸಿ ಹಾಗೂ ಯಾತ್ರಾಸ್ಥಳವಾಗಿರುವ ಬನ್ನೇರುಘಟ್ಟದಲ್ಲಿ 20 ಚದರ ಮೈಲಿಗಳ ರಾಷ್ಟ್ರೀಯ ಅರಣ್ಯೋದ್ಯಾನ ಅಭಿವೃದ್ಧಿ ಯೋಜನೆಯನ್ನು ರಾಜ್ಯಪಾಲ ಶ್ರೀ ಧರ್ಮವೀರ ಅವರು ಇಂದು ಉದ್ಘಾಟಿಸಿದರು.
ಸಸಿಯೊಂದನ್ನು ನೆಡುವ ಮೂಲಕ ಉದ್ಘಾಟನೆ ನೆರವೇರಿಸಿದ ರಾಜ್ಯಪಾಲರು, ‘ಅರಣ್ಯದ ಸುತ್ತಲಿರುವ ಪ್ರದೇಶದಲ್ಲಿ ಜಾನುವಾರು ವಿಮೆ ಯೋಜನೆಯನ್ನು ಜಾರಿಗೆ ತರುವುದರಿಂದ, ಜನರು ಜಾನುವಾರು ಹಿಡಿಯುವ ವನ್ಯಮೃಗಗಳನ್ನು ಕೊಲ್ಲುವ ಪ್ರಕರಣಗಳನ್ನು ತಪ್ಪಿಸಬಹುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.