ADVERTISEMENT

50 ವರ್ಷಗಳ ಹಿಂದೆ: ಶನಿವಾರ, 9–1–1971

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 14:43 IST
Last Updated 8 ಜನವರಿ 2021, 14:43 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಮೇಯರ್‌ ಆಯ್ಕೆಗೆ ಸೇರಲಿದ್ದ ಕಾರ್ಪೊರೇಷನ್‌ ಸಭೆ ಹಠಾತ್‌ ರದ್ದು

ಬೆಂಗಳೂರು, ಜ. 8– ಮೇಯರ್‌ ಹಾಗೂ ಉಪಮೇಯರ್‌ಗಳನ್ನು ಚುನಾಯಿಸಲು ಸೇರಲಿದ್ದ ನೂತನ ಕಾರ್ಪೊರೇಷನ್ನಿನ ಪ್ರಥಮ ಸಭೆ ಸೇರುವ ಸುಮಾರು 3 ಗಂಟೆಗಳ ಮುನ್ನ ಕಮಿಷನರ್‌ ಅವರು ಹಠಾತ್ತನೆ ಸಭೆಯನ್ನು ರದ್ದುಗೊಳಿಸಿದರು.

ನಿಯಮದಂತೆ ಸಕಾಲದಲ್ಲಿ ಕಾರ್ಪೊರೇಷನ್‌ ಚುನಾವಣೆಗಳ ಫಲಿತಾಂಶ ರಾಜ್ಯ ಪತ್ರದಲ್ಲಿ ಪ್ರಕಟವಾಗದಿದ್ದುದೇ ಕಮಿಷನರ್‌ ಅವರ ಈ ನಿರ್ಧಾರಕ್ಕೆ ಕಾರಣ. ಈ ಅನಿರೀಕ್ಷಿತ ಬೆಳವಣಿಗೆ ಬಗ್ಗೆ ಕಾರ್ಪೊರೇಷನ್ನಿನ ನಾನಾ ರಾಜಕೀಯ ಪಕ್ಷಗಳಲ್ಲಿ ತೀವ್ರ ಪ್ರತಿಕ್ರಿಯೆಗಳುಂಟಾದವು.

ADVERTISEMENT

ಬರೀ ವಿಚಾರಣೆಯಲ್ಲ, ಅಧಿಕಾರಿ ಸಸ್ಪೆಂಡ್‌ ಆಗಬೇಕು: ಅರಸು

ಬೆಂಗಳೂರು, ಜ. 8– ಇಂದು ನಡೆಯಬೇಕಾಗಿದ್ದ ಕಾರ್ಪೊರೇಷನ್‌ ಸಭೆ ರದ್ದಾದ ಪ್ರಕರಣ, ‘ಕೇವಲ ಸಾಮಾನ್ಯ ವಿಚಾರಣೆ ನಡೆಸುವುದಲ್ಲ, ಸಂಬಂಧಪಟ್ಟ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡುವ ಪ್ರಸಂಗ’ ಎಂದು ಆಡಳಿತ ಕಾಂಗ್ರೆಸ್ಸಿನ ರಾಜ್ಯ ಅಡ್‌ಹಾಕ್‌ ಸಮಿತಿ ಸಂಚಾಲಕ ಶ್ರೀ ಡಿ.ದೇವರಾಜ ಅರಸ್‌ ಅವರು ಇಂದು ವರದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.